ಶನಿವಾರಸಂತೆ, ಜೂ. ೧೯ : ಕೊಡಗು ಅಭಿನಯ ಕಲಾ ಮಿಲನ ಚಾರಿಟೇಬಲ್ ಟ್ರಸ್ಟ್ ಹಾಗೂ ಕುಶಾಲನಗರ ಕಣಿವೆ ಕಟ್ಟೆ ಸಂಯುಕ್ತ ಆಶ್ರಯದಲ್ಲಿ “ಸಾಹಿತಿ ಶ.ಗ. ನಯನತಾರಾ ಅವರ ಕೃತಿಗಳನ್ನು ಓದೋಣ’’ ಎಂಬ ಸಾಹಿತಿ ನಯನತಾರಾ ಅವರ ಕೃತಿಗಳನ್ನು ಪರಿಚಯಿಸುವ ಸಾಹಿತ್ಯಾತ್ಮಕ ಕಾರ್ಯಕ್ರಮ ತಾ. ೨೧ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಶನಿವಾರಸಂತೆಯ ನಾಟ್ಯ ಸದನದ “ನಾಟ್ಯ ಮಿಲನ ನೃತ್ಯ ಶಾಲಾ’’ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಜಿಲ್ಲೆಯ ಹಿರಿಯ ಸಾಹಿತಿ ಭಾರದ್ವಾಜ ಕೆ. ಆನಂದತೀರ್ಥ ಅವರ ನೇತೃತ್ವದಲ್ಲಿ ನಡೆಯುವ ಕಾರ್ಯಕ್ರಮವನ್ನು ಕುಶಾಲನಗರ ಪ್ರಜ್ಞಾವಂತ ನಾಗರಿಕರ ವೇದಿಕೆ ಅಧ್ಯಕ್ಷ ವಿ.ಪಿ. ಶಶಿಧರ್ ಉದ್ಘಾಟಿಸಲಿದ್ದಾರೆ. ಸೋಮವಾರಪೇಟೆ ಸಾಹಿತಿ ಜಲಾ ಕಾಳಪ್ಪ ಅವರು “ಶನಿವಾರಸಂತೆ-ಕೊಡ್ಲಿಪೇಟೆ; ಒಂದು ಸಾಂಸ್ಕೃತಿಕ ಪಕ್ಷಿನೋಟ ಕೃತಿ, ಸಾಹಿತಿ ಶರ್ಮಿಳಾ ರಮೇಶ್ ಅವರು “ಕೊಡಗಿನ ಗೌರಮ್ಮನವರ ಕಥೆಗಳಲ್ಲಿ ಪರಿವರ್ತನೆಯ ಚಿಂತನೆಗಳು’’ ಕೃತಿ, ಕುಶಾಲನಗರ ಸಾಹಿತಿ ಸುನಿತಾ ಲೋಕೇಶ್ ಅವರು ‘’ವೈವಿಧ್ಯತೆಯಲ್ಲಿ ಅರಳಿದ ವೈಚಾರಿಕ ಲೇಖನಗಳು’’ ಕೃತಿ, ಮಡಿಕೇರಿಯ ಬರಹಗಾರ ರಂಜಿತ್ ಕವಲಪಾರ ಅವರು “ಹೊಸ ಬೆಳಕಿನತ್ತ’’ ಕಥಾ ಸಂಕಲನ ಹಾಗೂ ಯಡವನಾಡು ಲೇಖಕ ಹೇಮಂತ್ ಪಾರೇರ ಅವರು “ಭಾವನಾ ತರಂಗ’’ ಕವನ ಸಂಕಲನ ಕುರಿತು ಮಾತನಾಡಿಸುತ್ತಾರೆ. ಮುಖ್ಯ ಅತಿಥಿಗಳಾಗಿ ಸಾಹಿತಿ ಸ್ಮಿತಾ ಅಮೃತ ರಾಜ್, ಅಭಿನಯ ಕಲಾ ಮಿಲನ ಚಾರಿಟೇಬಲ್ ಟ್ರಸ್ಟ್ನ ಟ್ರಸ್ಟಿ ಕುದುಕುಳಿ ಜೆ. ಭರತ್, ಸಾಹಿತಿ, ಕಣಿವೆ ಕಟ್ಟೆ ಸಂಚಾಲಕ ಉಮೇಶ್, ಸಹ ಸಂಚಾಲಕರಾದ ಪ್ರೇಮ್ ಕುಮಾರ್ ಹಾಗೂ ಎಂ.ಎನ್. ವೆಂಕಟ ನಾಯಕ್ ಉಪಸ್ಥಿತರಿರಲಿದ್ದಾರೆ ಎಂದು ಕಾರ್ಯಕ್ರಮ ಆಯೋಜಕಿ ಮಿಲನಾ ಭರತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.