ಸುಂಟಿಕೊಪ್ಪ, ಜೂ.೧೯: ಸುಂಟಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹೋಂಸ್ಟೇ ನಡೆಸುವವರು ಮೊದಲಿಗೆ ಪ್ರವಾಸಿಗರ ಸುರಕ್ಷತೆಗೆ ಆದ್ಯತೆ ನೀಡಬೇಕು, ಅಲ್ಲದೆ ತಮ್ಮ ನೆರೆಯವರಿಗೆ ತೊಂದರೆಯಾಗದAತೆ ನಿರ್ವಹಿಸುವುದು ಮುಖ್ಯವೆಂದು ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಮೋಹನ್ ರಾಜ್ ಹೋಂಸ್ಟೆ ಮತ್ತು ರೇಸಾರ್ಟ್ ಮಾಲೀಕರಿಗೆ ಹೇಳಿದರು.

ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಆಯೋಜಿಸಲಾದ ಹೋಂಸ್ಟೆ ಹಾಗೂ ರೆಸಾರ್ಟ್ ಮಾಲೀಕರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸರಕಾರದ ಮಾರ್ಗಸೂಚಿ, ಪೊಲೀಸ್ ಇಲಾಖೆಯ ನಿಯಮ, ಪ್ರವಾಸೋದ್ಯಮ ಇಲಾಖೆಯ ಅಧಿಕೃತ ಮಾರ್ಗಸೂಚಿಗಳನ್ವಯ ಪ್ರವಾಸಿಗರ ಸುರಕ್ಷತೆ ಹೋಂಸ್ಟೇಗಳನ್ನು ಕಡ್ಡಾಯ ನೋಂದಣಿ ಮಾಡಬೇಕು. ಸಿಸಿಟಿವಿ ಅಳವಡಿಕೆ ಮಾಡಬೇಕು. ಸಿಬ್ಬಂದಿಗಳ ನೇಮಕಾತಿಗೊಂಡಾಗ ಅವರ ಸಂಪೂರ್ಣ ದಾಖಲಾತಿ ಹಾಗೂ ಪೊಲೀಸ್ ಇಲಾಖೆ ಮಾಹಿತಿ ನೀಡಿ ಪರಿಶಿಲನೆ ಆದ್ಯತೆ ನೀಡಬೇಕೆಂದರು.

ನೆರೆ ಹೊರೆಯವರಿಗೆ ತೊಂದರೆಯಾಗದAತೆ ಎಚ್ಚರವಹಿಸಬೇಕು. ಹೋಂಸ್ಟೆ ಮತ್ತು ರೇಸಾರ್ಟ್ಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ನಿರ್ವಹಣೆ ಸೇರಿದಂತೆ ಸರಕಾರದ ಇತರ ಎಲ್ಲಾ ಮಾರ್ಗಸೂಚಿ ಹಾಗೂ ಆದೇಶದ ಬಗ್ಗೆ ಮಾಹಿತಿ ನೀಡಿದರು. ಎಲ್ಲಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದರು.