ಮಡಿಕೇರಿ, ಜೂ. ೨೧: ರೋಟರಿ ಮಿಸ್ಟಿ ಹಿಲ್ಸ್ ನಿರ್ದೇಶಕ ಮಡಿಕೇರಿ ನಗರ ಚೇಂಬರ್ ಆಫ್ ಕಾಮರ್ಸ್, ಸ್ಕೌಟ್ಸ್ ಆ್ಯಂಡ್ ಗೈಡ್ಸ್, ರೆಡ್ ಕ್ರಾಸ್, ಜಾನಪದ ಪರಿಷತ್ ಹೀಗೆ ನಾನಾ ಸಮಾಜಸೇವಾ ಸಂಘಸAಸ್ಥೆಗಳಲ್ಲಿ ಸಕ್ರಿಯರಾಗಿರುವ ಎಂ.ಧನAಜಯ್ ಅವರ ಸಮಾಜಮುಖಿ ಕಾರ್ಯಕ್ರಮಗಳನ್ನು ಗುರುತಿಸಿ ರೋಟರಿ ಜಿಲ್ಲೆ ೩೧೮೧ರ ಪ್ರತಿಷ್ಠಿತ ಅನ್ ಸಂಗ್ ಹೀರೋ ಪ್ರಶಸ್ತಿ ಲಭಿಸಿದೆ.
ಮೈಸೂರಿನಲ್ಲಿ ಆಯೋಜಿತ ರೋಟರಿ ಜಿಲ್ಲೆ ೩೧೮೧ರ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ರೋಟರಿ ಜಿಲ್ಲಾ ಗವರ್ನರ್ ರಾಮಕೃಷ್ಣ, ಖ್ಯಾತ ಚಿತ್ರನಟಿ ರಾಧಿಕಾ ನಾರಾಯಣ್, ಸಹಾಯಕ ಗವರ್ನರ್ ದಿಲ್ಲನ್ ಚಂಗಪ್ಪ ಸೇರಿದಂತೆ ರೋಟರಿ ಪ್ರಮುಖರು ಧನಂಜಯ್‌ಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು. ಕೋವಿಡ್ ಪರಿಸ್ಥಿತಿಯಲ್ಲಿ ಮಡಿಕೇರಿ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷರಾಗಿ ಎಂ.ಧನAಜಯ್ ಮಡಿಕೇರಿಯ ಸರ್ಕಾರಿ ಬಸ್ ನಿಲ್ದಾಣದಲ್ಲಿಯೇ ತನ್ನ ಗೆಳೆಯರೊಂದಿಗೆ ಮಾರುಕಟ್ಟೆ ತೆರೆದು ಗ್ರಾಹಕರಿಗೆ ಪ್ರಯೋಜನ ನೀಡಿದ್ದು, ಮನೆಮನೆಗೂ ಪಡಿತರ, ಔಷಧಿ ವಿತರಿಸಿದ್ದರು.