ವೀರಾಜಪೇಟೆ, ಜೂ. ೨೩: ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಮಂತ್ರಿ ಸ್ಥಾನ ನೀಡಬೇಕೆಂದು ವೀರಾಜಪೇಟೆ ವಕೀಲರ ಸಂಘ ಒತ್ತಾಯಿಸಿದೆ.
ಎ.ಎಸ್. ಪೊನ್ನಣ್ಣ ಅವರು ವಕೀಲರಾಗಿ ಹಾಗೂ ಶಾಸಕರಾಗಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ಅವರಿಗೆ ಸಚಿವ ಸಂಪುಟ ದರ್ಜೆ ಸ್ಥಾನ ನೀಡಬೇಕು ಅವರಿಗೆ ರಾಜ್ಯ ಕಾನೂನು ಮಂತ್ರಿ ಸ್ಥಾನವನ್ನು ನೀಡಬೇಕು ಎಂದು ಅಧ್ಯಕ್ಷ ಸಿ.ಕೆ. ಪೂವಣ್ಣ, ವಕೀಲ ಬೊಳ್ಳಚಂಡ ಸೋಮಣ್ಣ, ವಕೀಲ ಪ್ರದ್ಯುಮ್ನ ಒತ್ತಾಯಿಸಿದರು.
ಈ ಸಂದರ್ಭ ವೀರಾಜಪೇಟೆಯ ವಕೀಲರುಗಳಾದ ಚೋವಂಡ ಪೊನ್ನಣ್ಣ, ಹಾಜೀರಾ ಶರೀಫ್, ನಜುಬುದ್ದೀನ್, ಕೊಳವಂಡ ನಾಚಪ್ಪ, ಕಾವ್ಯ ಸೇರಿದಂತೆ ವಕೀಲರ ಸಂಘದ ಪದಾಧಿಕಾರಿಗಳು ಹಾಗೂ ಹಲವು ವಕೀಲರು ಉಪಸ್ಥಿತರಿದ್ದರು.