ಕುಶಾಲನಗರ, ಜೂ. ೨೩: ಜೀಪು ಚಾಲಕನೊಬ್ಬ ರಸ್ತೆಯಲ್ಲಿ ಮಲಗಿದ್ದ ನಾಯಿಗಳ ಮೇಲೆ ವೇಗವಾಗಿ ವಾಹನ ಚಲಾಯಿಸಿ, ನಾಲ್ಕು ನಾಯಿಗಳಿಗೆ ತೀವ್ರ ಗಾಯ ಉಂಟಾದ ಘಟನೆ ಸಮೀಪದ ಮಾದಪಟ್ಟಣ ಗ್ರಾಮದಲ್ಲಿ ನಡೆದಿದೆ. ಎಂವೈಝೆಡ್ ೨೭೭೦ ನೋಂದಣಿಯ ಜೀಪ್ ಚಾಲಕ ಮಂಗಳವಾರ ಬೆಳಿಗ್ಗೆ ರಸ್ತೆ ಬದಿಯಲ್ಲಿ ಮಲಗಿದ್ದ ೫ ನಾಯಿಗಳ ಮೇಲೆ ಜೀಪನ್ನು ವೇಗವಾಗಿ ಚಲಾಯಿಸಿದ್ದು, ನಾಯಿಗಳ ದೇಹ ಭಾಗಗಳ ಮೇಲೆ ವಾಹನದ ಚಕ್ರ ಹರಿದು ಚಿಂತಾಜನಕ ಸ್ಥಿತಿ ಎದುರಾಗಿದೆ. ಇದನ್ನು ಗಮನಿಸಿದ ಸ್ಥಳೀಯರು ಕುಶಾಲನಗರ ಟೌನ್ ಪೊಲೀಸ್ ಠಾಣೆಯಲ್ಲಿ ಅಮಾನವೀಯವಾಗಿ ವರ್ತಿಸಿದ ವಾಹನ ಚಾಲಕನ ಮೇಲೆ ದೂರು ನೀಡಿದ್ದು, ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಗಾಯಗೊಂಡ ನಾಯಿಗಳಿಗೆ ಚಿಕಿತ್ಸೆ ನೀಡಲು ಮುಂದಾಗಿದ್ದಾರೆ.