ಸೋಮವಾರಪೇಟೆ, ಜೂ. ೨೬: ರಾಜ್ಯದ ಪ್ರಥಮ ಮಹಿಳಾ ಉದ್ಯಮಿ ಹಾಗೂ ದಾನಿಗಳಾದ ಡಿ. ಸಾಕಮ್ಮ ಅವರ ಸಾಮಾಜಿಕ ಸೇವೆಗಳ ಸ್ಮರಣೆಗಾಗಿ ಡಾಲ್ಫಿನ್ಸ್ ಸ್ಪೋರ್ಟ್ಸ್ ಕ್ಲಬ್ ಕಾರ್ಯಯೋಜನೆ ಸಿದ್ಧಪಡಿಸಿದ್ದು, ಹಂತ ಹಂತವಾಗಿ ಅನುಷ್ಠಾನಕ್ಕೆ ತರಲಾಗುವುದು ಎಂದು ಕ್ಲಬ್ ಅಧ್ಯಕ್ಷ ಬಿ.ಆರ್. ಮಹೇಶ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಮಹಿಳಾ ಸಾಧಕಿಯ ಹೆಸರು ಈಗಿನ ಯುವಜನರಿಗೆ ಅಷ್ಟಾಗಿ ತಿಳಿದಿಲ್ಲ. ಹಿಂದೆ ಅವರ ಬಸವೇಶ್ವರ ರಸ್ತೆಯಲ್ಲಿನ ಬಂಗಲೆಗೆ ಸಾಕಷ್ಟು ಜನರು ಭೇಟಿ ನೀಡಿ ಮಾಹಿತಿ ಪಡೆಯುತ್ತಿದ್ದರು. ಈಗ ಸಾಧ್ಯವಾಗುತ್ತಿಲ್ಲ. ಸಾಧಕ ಮಹಿಳೆಯ ಹೆಸರನ್ನು ಪಟ್ಟಣದ ಪ್ರಮುಖ ರಸ್ತೆಗೆ ಇರಿಸಿ ಅವರನ್ನು ಸ್ಮರಿಸುವಂತಾಗಬೇಕು ಎಂದರು. ಇದರೊಂದಿಗೆ ಪಟ್ಟಣ ವ್ಯಾಪ್ತಿಯ ಸೂಕ್ತ ಸ್ಥಳದಲ್ಲಿ ಅವರ ಪ್ರತಿಮೆ ನಿರ್ಮಾಣ ಮಾಡಲು ಶಾಸಕರು ಹಾಗೂ ಸಂಘ-ಸAಸ್ಥೆಗಳ ಸಹಕಾರದೊಂದಿಗೆ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.

ಕ್ಲಬ್‌ನ ಸಲಹೆಗಾರ ಕೆ.ಎಸ್. ಪ್ರಕಾಶ್ ಮಾತನಾಡಿ, ಡಾಲ್ಫಿನ್ಸ್ ಸ್ಪೋರ್ಟ್ಸ್ ಕ್ಲಬ್ ಹಾಕಿ ಕ್ರೀಡೆಯಲ್ಲಿ ಸಾಕಷ್ಟು ಪ್ರತಿಭೆಗಳಿಗೆ ತರಬೇತಿ ನೀಡುವ ಮೂಲಕ ರಾಷ್ಟç ಮತ್ತು ಅಂತರರಾಷ್ಟಿçÃಯ ಮಟ್ಟದಲ್ಲಿ ಬೆಳಗುವಂತೆ ಮಾಡಿದೆ. ಇದರೊಂದಿಗೆ ಸಾಮಾಜಿಕ ಕೆಲಸಗಳನ್ನು ಮಾಡುತ್ತಿದೆ ಎಂದು ತಿಳಿಸಿದರು. ಜಿಲ್ಲೆಯಲ್ಲಿ ಈ ಹಿಂದೆ ಆಳಿದ ಲಿಂಗರಾಜ ಅರಸು ಮತ್ತು ವೀರರಾಜೇಂದ್ರ ಅರಸು ಅವರ ಹೆಸರು ಇಂದಿಗೂ ಜನಮಾನಸದಲ್ಲಿ ಉಳಿದಿದೆ. ಆದರೆ, ಅವರಂತೆ ಇದ್ದ ದೊಡ್ಡಮನೆ ಕುಟುಂಬದ ಸಾಕಮ್ಮ ಮಾತ್ರ ನಮ್ಮಿಂದ ಮರೆಯಾಗಿದ್ದಾರೆ. ಸಮಾಜಕ್ಕೆ ನೆರವಾಗಲು ಸಾಕಷ್ಟು ಭೂಮಿ, ಹಣ ದಾನ ಮಾಡಿದ್ದು, ಇಂದಿಗೂ ಪಟ್ಟಣದಲ್ಲಿ ಕಾಣಬಹುದು. ಮುಂದಿನ ಪೀಳಿಗೆಗೆ ಅವರನ್ನು ಪರಿಚಯಿಸುವ ನಿಟ್ಟಿನಲ್ಲಿ ಕ್ಲಬ್ ವತಿಯಿಂದ ಯೋಜನೆಗಳನ್ನು ರೂಪಿಸಲಾಗಿದೆ ಎಂದರು. ಇದರೊಂದಿಗೆ ಸಾಕಮ್ಮ ಅವರ ಹೆಸರನ್ನು ಪಟ್ಟಣದ ಪ್ರಮುಖ ರಸ್ತೆಗೆ ಇರಿಸಲು ಪಟ್ಟಣ ಪಂಚಾಯಿತಿ ಮತ್ತು ಪ್ರತಿಮೆ ಸ್ಥಾಪಿಸಲು ಸ್ಥಳಕ್ಕಾಗಿ ಶಾಸಕರು ಹಾಗೂ ತಹಶೀಲ್ದಾರ್ ಅವರೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ತಿಳಿಸಿದರು. ಗೋಷ್ಠಿಯಲ್ಲಿ ಕ್ಲಬ್ ಪ್ರಧಾನ ಕಾರ್ಯದರ್ಶಿ ಬಿ.ಎನ್. ಮಂಜುನಾಥ್, ಸದಸ್ಯ ಮಿಲನ್ ಇದ್ದರು.