ಗೋಣಿಕೊಪ್ಪ, ಜೂ. ೨೬: ಕರ್ನಾಟಕ ಯೂತ್ ಲೀಗ್‌ನಲ್ಲಿ ನಕ್ಷತ್ರ ಫುಟ್ಬಾಲ್ ಅಕಾಡೆಮಿ ಭಾಗವಹಿಸುತ್ತಿದ್ದು, ಇದರ ಭಾಗವಾಗಿ ಕೊಡಗು ಜಿಲ್ಲಾ ತಂಡದ ಆಯ್ಕೆ ಪ್ರಕ್ರಿಯೆ ತಾ. ೨೮ ರಂದು ಆಯೋಜಿಸಲಾಗಿದೆ ಎಂದು ನಕ್ಷತ್ರ ಫುಟ್ಬಾಲ್ ಅಕಾಡೆಮಿ ಸಂಸ್ಥಾಪಕ ಹರೀಶ್ ತಿಳಿಸಿದ್ದಾರೆ. ಗೋಣಿಕೊಪ್ಪದ ವೆಂಬ್ಲಿ ಫುಟ್ಬಾಲ್ ಟರ್ಫ್ನಲ್ಲಿ ಬೆಳಿಗ್ಗೆ ೯ ಗಂಟೆಗೆ ಟ್ರಯಲ್ಸ್ ನಡೆಯಲಿದ್ದು, ಆಸಕ್ತ ಯುವ ಆಟಗಾರರು ಮೂಲ ಆಧಾರ್ ಕಾರ್ಡ್ ಹಾಗೂ ಶಾಲಾ ಗುರುತಿನ ಚೀಟಿಯೊಂದಿಗೆ ಹಾಜರಾಗಬೇಕು. ಪ್ರವೇಶ ಉಚಿತವಾಗಿದ್ದು, ಆಯ್ಕೆಯಾದ ಆಟಗಾರರು ನಕ್ಷತ್ರ ಫುಟ್ಬಾಲ್ ಅಕಾಡೆಮಿ ಪರವಾಗಿ ಕರ್ನಾಟಕ ಯೂತ್ ಪ್ರೀಮಿಯರ್ ಲೀಗ್, ಙPಐ ಹಾಗೂ ಆPಆಐ ಲೀಗ್‌ನಲ್ಲಿ ಪಾಲ್ಗೊಳ್ಳುವ ಅವಕಾಶ ಪಡೆಯಲಿದ್ದಾರೆ. ಸೀಮಿತ ಸ್ಥಾನಗಳಿರುವುದರಿಂದ ಮೊದಲು ನೋಂದಾಯಿಸಿದ ಆಟಗಾರರಿಗೆ ಮಾತ್ರ ಅವಕಾಶ ನೀಡಲಾಗುವುದು. ಆಯ್ಕೆ ಪ್ರಕ್ರಿಯೆ ೯, ೧೧, ೧೩, ೧೫ ಹಾಗೂ ೧೭ವರ್ಷದೊಳಗಿನ ವಿಭಾಗದಲ್ಲಿ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ೮೯೫೧೮೨೦೨೫೧ ಸಂಪರ್ಕಿಸಬಹುದಾಗಿದೆ.