ಶನಿವಾರಸAತೆ, ಜೂ. ೨೭: ನಾಡಪ್ರಭು ಕೆಂಪೇಗೌಡರು ಯಾವುದೇ ಒಂದು ಜಾತಿ, ಧರ್ಮಕ್ಕೆ ಸೀಮಿತವಾದ ವ್ಯಕ್ತಿಯಲ್ಲ. ಸರ್ವ ಕನ್ನಡಿಗರು ಗೌರವಿಸುವ ಒಂದು ಶಕ್ತಿಯಾಗಿದ್ದಾರೆ ಎಂದು ಕೆಂಪೇಗೌಡ ಒಕ್ಕಲಿಗರ ಸಂಘದ ಸಹ ಕಾರ್ಯದರ್ಶಿ ಹಾಗೂ ಉಪನ್ಯಾಸಕ ಎ.ಹೆಚ್. ಚಂದ್ರಕಾAತ್ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಶನಿವಾರ ಕೆಂಪೇಗೌಡ ಒಕ್ಕಲಿಗರ ಸಂಘದ ವತಿಯಿಂದ ನಡೆದ ನಾಡಪ್ರಭು ಕೆಂಪೇಗೌಡ ಜಯಂತೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಐದು ಶತಮಾನಗಳ ಹಿಂದೆ ಸುಂದರ ಬೆಂಗಳೂರು ನಗರ ನಿರ್ಮಾಣ, ಸಮೃದ್ಧ ಕೆರೆಗಳು, ಪೇಟೆಗಳು, ರಕ್ಷಣಾತ್ಮಕ ಗೋಪುರಗಳನ್ನು ನಿರ್ಮಿಸಿದ ಮಹಾನ್ ಶಿಲ್ಪಿ ನಾಡಪ್ರಭು ಕೆಂಪೇಗೌಡರ ಆಡಳಿತ ವೈಖರಿ ಇಂದಿಗೂ ಕನ್ನಡ ನಾಡಿಗೆ ಪ್ರೇರಣೆಯಾಗಿದೆ ಎಂದರು.
ಮುಖAಡ ಎಸ್.ಎನ್. ರಘು ಮಾತನಾಡಿ, ಕೆಂಪೇಗೌಡರು ಇಂದಿನ ಯುವಜನಾಂಗಕ್ಕೆ ಆದರ್ಶವಾಗಿದ್ದಾರೆ ಎಂದರು. ಒಕ್ಕಲಿಗರ ಸಂಘದ ನಿರ್ದೇಶಕ ಎನ್.ಕೆ. ಅಪ್ಪಸ್ವಾಮಿ ಹಾಗೂ ಸಿ.ಜೆ. ಗಿರೀಶ್ ಮಾತನಾಡಿ, ಸೌಹಾರ್ದ ನಾಡಾಗಿ ಬೆಂಗಳೂರನ್ನು ನಿರ್ಮಿಸಿದ ಕೆಂಪೇಗೌಡರ ಜೀವನ, ಆಡಳಿತ ಎಲ್ಲರಿಗೂ ಮಾದರಿಯಾಗಿದೆ ಎಂದರು.
ಕೆAಪೇಗೌಡ ಒಕ್ಕಲಿಗರ ಸಂಘದ ಅಧ್ಯಕ್ಷ ಕೇಶವಮೂರ್ತಿ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರಧಾನ ಕಾರ್ಯದರ್ಶಿ ಹರೀಶ್ ಕುಮಾರ್, ನಿರ್ದೇಶಕರಾದ ಮೋಹನ್, ಆನಂದ್, ಯೋಗಾನಂದ್, ಮುಖಂಡರಾದ ಎಂ.ಜೆ. ವಿನೋದ್, ಮಂಜು, ಕಿರಣ್, ಬಿ.ಕೆ. ಚಂದ್ರು, ಆಟೋ ಹಾಗೂ ವಾಹನ ಚಾಲಕರ ಸಂಘದ ಸದಸ್ಯರು, ವರ್ತಕರು, ಸಾರ್ವಜನಿಕರು ಹಾಜರಿದ್ದರು. ಹರೀಶ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.