ಸೋಮವಾರಪೇಟೆ, ಜೂ. ೨೭: ಸಮೀಪದ ನೇರುಗಳಲೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ತಾ. ೨೯ ರಂದು ಪೂರ್ವಾಹ್ನ ೧೦.೩೦ ಗಂಟೆಗೆ ಖೇತ್ ಬಚಾವೋ ಅಭಿಯಾನ ಮತ್ತು ಬೀಜೋಪಚಾರ ಆಂದೋಲನ ಹಾಗೂ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆ ಕುರಿತು ಕೆವಿಕೆ, ಕಾಫಿ ಬೋರ್ಡ್. ಸಂಬಾರ ಮಂಡಳಿ ವಿಜ್ಞಾನಿಗಳಿಂದ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.
ಕಾರ್ಯಕ್ರಮದಲ್ಲಿ ಕಾಫಿ, ಕಾಳುಮೆಣಸು, ಏಲಕ್ಕಿ, ಶುಂಠಿ, ಭತ್ತ ಮತ್ತು ಮುಸುಕಿನ ಜೋಳ ಬೆಳೆಗಳ ಬಗ್ಗೆ ವಿಜ್ಞಾನಿಗಳಿಂದ ತಾಂತ್ರಿಕ ಮಾಹಿತಿಯನ್ನು ಪಡೆಯಬಹುದಾಗಿರುತ್ತದೆ. ಯಾವುದಾದರೂ ಬೆಳೆಗಳಲ್ಲಿ ರೋಗ ಅಥವಾ ಕೀಟದ ಸಮಸ್ಯೆಯಿದ್ದಲ್ಲಿ ಸದರಿ ಬೆಳೆಯ ಮಾದರಿಯನ್ನು ತಂದು ವಿಜ್ಞಾನಿಗಳಿಂದ ಸೂಕ್ತ ಸಲಹೆಗಳನ್ನು ಪಡೆಯಬಹುದಾಗಿದೆ.