ಚೆಯ್ಯಂಡಾಣೆ, ಜೂ. ೨೮: ಎಮ್ಮೆಮಾಡುವಿನಲ್ಲಿ ಸಮಸ್ತ ಸ್ಥಾಪಕ ದಿನದ ಅಂಗವಾಗಿ ಜುಮಾ ನಮಾಝ್ ಬಳಿಕ ಎಮ್ಮೆಮಾಡು ಸೆಂಟರ್ ಯೂನಿಟ್ ವತಿಯಿಂದ ತಾಜುಲ್ ಉಲಮಾ ಸುನ್ನಿ ಸೆಂಟರ್ನಲ್ಲಿ ಸಂಘ ಕುಟುಂಬ ಎಸ್ಎಸ್ಎಫ್, ವೈಎಸ್ ಹಾಗೂ ಕೆಎಂಜೆ ನೇತೃತ್ವದಲ್ಲಿ ಜಂಟಿಯಾಗಿ ಧ್ವಜಾರೋಹಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಎಸ್ವೈಎಸ್ ರಾಜ್ಯ ಉಪಾಧ್ಯಕ್ಷರಾದ ಸಯ್ಯಿದ್ ಇಲ್ಯಾಸ್ ಅಲ್ ಐದರೂಸಿ ತಂಙಳ್ ಎಮ್ಮೆಮಾಡು ಸಮಸ್ತ ನಡೆದುಬಂದ ಹಾದಿ ಹಾಗೂ ದಿನದ ಮತ್ವದ ಕುರಿತು ಮಾತನಾಡಿದರು. ಎಸ್ವೈಎಸ್ ರಾಜ್ಯ ಸದಸ್ಯ ಅಶ್ರಫ್ ಬಿ.ಯು. ಎಸ್ಐಆರ್ ಬಗೆ ಮಾಹಿತಿ ನೀಡಿ ಎಲ್ಲರೂ ಅದರಲ್ಲಿ ಭಾಗಿಯಾಗಬೇಕೆಂದು ಮನವರಿಕೆ ಮಾಡಿ ಕೊಟ್ಟರು.
ಸಯ್ಯಿದ್ ಅದೂರು ತಂಙಳ್, ಸರ್ಕಲ್ ಅಧ್ಯಕ್ಷರಾದ ಅಶ್ರಫ್ ಸಖಾಫಿ, ಕೆಸಿಎಫ್ ಅಂತಾರಾಷ್ಟ್ರೀಯ ನಾಯಕರಾದ ಜಲೀಲ್ ನಿಝಾಮಿ, ಯೂನಿಟ್ ಅಧ್ಯಕ್ಷರಾದ ಸಯ್ಯಿದ್ ಸೈಫುದ್ದೀನ್ ತಂಙಳ್,ಜಮಾಅತ್ ಕಾರ್ಯದರ್ಶಿ ಝಕರಿಯ ತಂಙಳ್, ಅನಾಥಾಲಯ ಅಧ್ಯಕ್ಷರಾದ ಶಾಧುಲಿ ಹಾಜಿ, ಕರ್ನಾಟಕ ಮುಸ್ಲಿಂ ಜಮಾಅತ್ ಅಧ್ಯಕ್ಷರಾದ ಉಸ್ಮಾನ್ ಹಾಜಿ, ಯೂನಿಟ್ ಕಾರ್ಯದರ್ಶಿ ಹಾರಿಸ್, ಕೋಶಾಧಿಕಾರಿ ಹಾರಿಸ್ ಸಅದಿ, ಅಬ್ದುಲ್ ರಹಿಮಾನ್ ಪಿ.ಎ., ಉಮ್ಮರ್ ಸಖಾಫಿ, ಯೂಸುಫ್ ಮುಸ್ಲಿಯಾರ್, ಹಾರಿಸ್ ಝುಹರಿ, ಇಬ್ರಾಹಿಂ ಹಾಗೂ ಜಮಾಅತ್ ಪದಾಧಿಕಾರಿಗಳು, ಎಸ್. ವೈಎಸ್, ಎಸ್ಎಸ್ಎಫ್, ಕೆಎಂಜೆ ಕಾರ್ಯಕರ್ತರು ಉಲಮಾ, ಉಮಾರ ನೇತಾರರು ಉಪಸ್ಥಿತರಿದ್ದರು.