ನಾಪೋಕ್ಲು, ಜೂ. ೩೦: ಪೆರಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾರ್ವಜನಿಕ ಸುರಕ್ಷತೆಯ ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗಳ ರಕ್ಷಣೆಯ ಹಿತದೃಷ್ಟಿಯಿಂದ ಕಳೆದ ಜೂನ್ ೧೦ ರಿಂದ ಅಕ್ಟೋಬರ್ ೩೧ ರವರೆಗೆ ಗ್ರಾಮ ಪಂಚಾಯಿತಿ ರಸ್ತೆಯಲ್ಲಿ ಘನ ವಾಹನಗಳು (೬, ೧೦, ೧೨ ಚಕ್ರದ ವಾಹನಗಳು) ಕರಿಕಲ್ಲು, ಕೆಂಪು ಕಲ್ಲು, ಮರಳು ಗಾಡಿಗಳು, ಮರದದಿಮ್ಮಿಗಳನ್ನು ತೆಗೆದುಕೊಂಡು ಹೋಗುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಮಳೆಗಾಲ ಪ್ರಾರಂಭವಾದ ಹಿನ್ನೆಲೆಯಲ್ಲಿ ಪಂಚಾಯಿತಿ ರಸ್ತೆಗಳು ಕುಸಿಯುವ ಹಂತ ತಲುಪಿದ್ದು, ರಸ್ತೆ ಕಡಿತಗೊಳ್ಳುವ ಮುನ್ಸೂಚನೆಗಳು ಇವೆ. ಮುಂದೆ ಇದರಿಂದ ಸಾರ್ವಜನಿಕರಿಗೆ ಮತ್ತು ಶಾಲಾ-ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗಬಹುದು. ಅಲ್ಲದೇ ಹೆಚ್ಚು ಮಳೆ ಬೀಳುವುದರಿಂದ ಭೂಕುಸಿತ ಉಂಟಾಗುವ ಸಂಭವ ಕೂಡ ಇರುವುದರಿಂದ ಈ ಎಲ್ಲಾ ಮುನ್ಸೂಚನೆಗಳನ್ನು ಮನಗಂಡು ಗ್ರಾಮಸ್ಥರು ಎಚ್ಚರಿಕೆಯಿಂದ ಇರುವಂತೆ ಗ್ರಾಮ ಪಂಚಾಯಿತಿ ಈ ಮೂಲಕ ಸೂಚನೆ ನೀಡಿದೆ.

ಮುಂದಿನ ದಿನಗಳಲ್ಲಿ ಪಂಚಾಯಿತಿ ರಸ್ತೆಯಲ್ಲಿ ಘನ ವಾಹನಗಳು ಸಾಮಗ್ರಿಗಳನ್ನು ತುಂಬಿಕೊAಡು ಹೋಗುವುದು ಕಂಡುಬAದಲ್ಲಿ ಸಾರ್ವಜನಿಕರು ವಾಹನದ ಫೋಟೋ ಸಹಿತ ಈ ಕೆಳಗಿನ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸುವAತೆ ಪಂಚಾಯಿತಿ ಪ್ರಕಟಣೆ ಕೋರಿದೆ.

ಸಂಪರ್ಕಿಸಬೇಕಾದ ಸಂಖ್ಯೆ : ೯೪೮೦೮೬೯೩೪೬, ೯೭೪೧೫೧೮೮೨೩.