ಶ್ರೀಮಂಗಲ, ಜೂ. ೩೦: ೨೦೨೭ರಲ್ಲಿ ನಡೆಯಲಿರುವ ಕೊಡವ ಕೌಟುಂಬಿಕ ಕ್ರಿಕೆಟ್ ಪಂದ್ಯಾವಳಿಯ ಬೆಳ್ಳಿ ಹಬ್ಬವನ್ನು ಕೊಟ್ಟಂಗಡ ಕುಟುಂಬದವರು ಆಯೋಜಿಸಲಿದ್ದು, ಇದರ ಪೂರ್ವಸಿದ್ಧತೆಗಳ ಕುರಿತು ಗೋಣಿಕೊಪ್ಪದಲ್ಲಿ ಪೂರ್ವಭಾವಿ ಸಭೆ ನಡೆಯಿತು.

ಸಭೆಯಲ್ಲಿ ಕೊಡವ ಕೌಟುಂಬಿಕ ಕ್ರಿಕೆಟ್ ಬೆಳ್ಳಿ ಹಬ್ಬವನ್ನು ಯಶಸ್ವಿಯಾಗಿ ಆಯೋಜಿಸಲು ಕೈಗೊಳ್ಳಬೇಕಾದ ಸಿದ್ಧತೆಗಳು, ಕಾರ್ಯಯೋಜನೆ ಹಾಗೂ ವಿವಿಧ ಸಮಿತಿಗಳ ಜವಾಬ್ದಾರಿಗಳ ಕುರಿತು ಕೊಡವ ಕ್ರಿಕೆಟ್ ಅಕಾಡೆಮಿ ಹಾಗೂ ಕೊಟ್ಟಂಗಡ ಕುಟುಂಬದ ಸದಸ್ಯರು ಸಮಾಲೋಚನೆ ನಡೆಸಿದರು.

ಸಭೆಯಲ್ಲಿ ಕೊಡವ ಕ್ರಿಕೆಟ್ ಅಕಾಡೆಮಿ ಅಧ್ಯಕ್ಷ ಕೀತಿಯಂಡ ಕಾರ್ಸನ್ ಕಾರ್ಯಪ್ಪ, ಉಪಾಧ್ಯಕ್ಷ ಚೇರಂಡ ಕಿಶನ್, ಕಾರ್ಯದರ್ಶಿ ಕುಂಡ್ರAಡ ಬೋಪಣ್ಣ, ಖಜಾಂಚಿ ಕೊಕ್ಕೆಂಗಡ ರಂಜನ್, ನಿರ್ದೇಶಕರಾದ ಕೀತಿಯಂಡ ವಿವೇಕ್ ಹಾಗೂ ಮಾಚಂಗಡ ದರ್ಶನ್, ಕೊಟ್ಟಂಗಡ ಕುಟುಂಬದ ಅಧ್ಯಕ್ಷ ಕೊಟ್ಟಂಗಡ ಮುದ್ದಪ್ಪ, ಕಾರ್ಯದರ್ಶಿ ಪ್ರಕಾಶ್, ಕ್ರೀಡಾಕೂಟ ಸಂಚಾಲಕ ಸೂರಜ್ ಮಾದಪ್ಪ, ಸಹ ಕಾರ್ಯದರ್ಶಿ ಡಿಕ್ಕಿ ನಾಣಯ್ಯ, ರಾಜ ಸುಬ್ಬಯ್ಯ, ಪ್ಯಾರಿ ವಿನೇಶ್, ಪ್ರಕಾಶ್ ಅಯ್ಯಪ್ಪ, ಮಂಜುನಾಥ್, ರನ್ನು ಬೋಪಯ್ಯ ಹಾಗೂ ವೀಕ್ಷಾ ಸೇರಿದಂತೆ ಕುಟುಂಬದ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.