ಮಡಿಕೇರಿ, ಜೂ. ೩೦: ವೀರಾಜಪೇಟೆಯ ಕಾವೇರಿ ಶಾಲೆಯಲ್ಲಿ ೨೦೨೬-೨೭ ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಸಂಸತ್ತು ರಚನೆ ಮಾಡಲು ಪದಾಧಿಕಾರಿಗಳ ಆಯ್ಕೆಗಾಗಿ ವಿದ್ಯಾರ್ಥಿಗಳು ಇವಿಎಂ ಮೂಲಕ ಮತವನ್ನು ಚಲಾಯಿಸಿದರು . ಈ ಸಂದರ್ಭ ಚುನಾವಣೆಯ ಮತಗಟ್ಟೆ ಅಧಿಕಾರಿಯಾಗಿ ಮುಖ್ಯ ಶಿಕ್ಷಕಿ ಪಾರ್ವತಿ ಪಿ.ಯು, ಸಹ ಅಧಿಕಾರಿಯಾಗಿ ಉಷಾ ಬಿ.ಪಿ ಹಾಗೂ ಸಿ ಲೀನಾ ದೇವಯ್ಯ ಕಾರ್ಯನಿರ್ವಹಿಸಿದರು.
ಶಾಲಾ ಸಂಸತ್ತು ಚುನಾವಣೆಯಲ್ಲಿ ಶಾಲಾ ನಾಯಕನಾಗಿ ಬೋವ್ವೇರಿಯಂಡ ಹನ್ಸಿಕ ಪೊನ್ನಪ್ಪ ಉಪ ನಾಯಕಿಯಾಗಿ ಪಟ್ಟಡ ಬಿ ದೇಚಮ್ಮ ಕ್ರೀಡಾ ನಾಯಕಿ ಕರ್ನಂಡ ಎಸ್. ಕೃತಿಕಾ ಅಕ್ಕಮ್ಮ, ಉಪ ನಾಯಕಿಯಾಗಿ ಕರ್ನಂಡ ಎಸ್ ಶತಕ ಕಾವೇರಮ್ಮ, ಸಾಂಸ್ಕೃತಿಕ ನಾಯಕಿಯಾಗಿ ಕುಲ್ಲಚಂಡ ಎಸ್. ಭೂಮಿಕಾ ಬೋಜಮ್ಮ , ಉಪ ನಾಯಕಿಯಾಗಿ ಚೋಕಂಡ ದಿತಿ ದೇಚಮ್ಮ, ಆರೋಗ್ಯ ನಾಯಕಿಯಾಗಿ ಐ.ಎಂ. ಅಮಾನ ಮನ್ನ, ಉಪ ಆರೋಗ್ಯ ನಾಯಕಿಯಾಗಿ ಕಾಳಚಂಡ ಎಂ ದೇಚಮ್ಮ , ಶಿಸ್ತಿನ ನಾಯಕಿಯಾಗಿ ಸನಾ ಕೆ. ಎಸ್, ಉಪ ಶಿಸ್ತಿನ ನಾಯಕಿಯಾಗಿ ಅಜಾನ್ ಎಂ ಎ, ಅಂಕುರ್ ಹೌಸ್ ಕ್ಯಾಪ್ಟನ್ ಆಗಿ ನೆಲ್ಲಚಂಡ ಎನ್ ಪೊನ್ನಮ್ಮ , ಉಪನಾಯಕನಾಗಿ ಯಕ್ಷಿತ್, ಆರೋಹಿ ಹೌಸ್ ಕ್ಯಾಪ್ಟನ್ ರಾನೀಯ ತಸ್ಲೀನ್ ಟಿ. ಎಫ್ , ಉಪ ನಾಯಕನಾಗಿ ಕುಟ್ಟಂಡ ಚಿರಾಗ್ ಚಂಗÀÀಪ್ಪ , ಐಕ್ಯಂ ಹೌಸ್ ಕ್ಯಾಪ್ಟನ್ ನಿಧಾ ಕೆ.ಎಚ್, ಉಪ ನಾಯಕಿಯಾಗಿ ಕೌಶಿಕ್ ಯು ಎಸ್, ಅದ್ವೆöÊತ್ ಹೌಸ್ ಕ್ಯಾಪ್ಟನ್ ಅಮರ್ನಾಥ್ ಎ.ಎಸ್ ಉಪನಾಯಕನಾಗಿ ಜಯಾನ್ ಎಂ ಹೆಚ್ ಆಯ್ಕೆಯಾದರು. ಆಯ್ಕೆಯಾದ ಎಲ್ಲಾ ನಾಯಕರುಗಳಿಗೆ ಪದವಿ ಪ್ರದಾನ ಮಾಡಲಾಯಿತು. ಈ ಸಂದರ್ಭ ಶಾಲೆಯ ಅಧ್ಯಕ್ಷರಾದ ಸುದೇಶ್ ಬಿ.ಎಸ್ ಮಾತನಾಡಿದರು. ಶಾಲಾ ನಾಯಕನಾಗಿ ಬೊವ್ವೇರಿಯಂಡ ಹನ್ಸಿಕ ಪೊನ್ನಪ್ಪ ಪ್ರತಿಜ್ಞಾ ವಿಧಿಯನ್ನು ಓದುವ ಮೂಲಕ ಇತರ ಚುನಾಯಿತ ನಾಯಕ ನಾಯಕಿಯರು ಅದನ್ನು ಪಾಲಿಸುವುದಾಗಿ ಪ್ರತಿಜ್ಞೆ ಮಾಡಿದರು.
ಕಾರ್ಯಕ್ರಮದಲ್ಲಿ ಕಾವೇರಿ ಶಾಲೆಯ ಆಡಳಿತ ಮಂಡಳಿಯ ಕಾರ್ಯದರ್ಶಿ ವಿನೋದ್ ಪಿ. ಎನ್, ಮುಖ್ಯ ಶಿಕ್ಷಕಿ ಪಾರ್ವತಿ ಪಿ.ಯು ಹಾಗೂ ಸಂಯೋಜಕಿ ಅಮೃತ ಅರ್ಜುನ್ ಉಪಸ್ಥಿತರಿದ್ದರು. ಸಹ ಶಿಕ್ಷಕಿ ತಮ್ಸೀನ ನಿರೂಪಿಸಿ, ಕಾರ್ಯದರ್ಶಿ ವಿನೋದ್ ಪಿ. ಎನ್ ವಂದಿಸಿದರು.