ಗೋಣಿಕೊಪ್ಪಲು, ಜೂ. ೩೦: ೨೦೨೫-೨೬ನೇ ಸಾಲಿನಲ್ಲಿ ಸಾರ್ವಜನಿಕ ಸೇವಾ ಕ್ಷೇತ್ರದಲ್ಲಿ ಸಲ್ಲಿಸಿದ ಅಸೇವೆಯನ್ನು ಪರಿಗಣಿಸಿ ಗೋಣಿಕೊಪ್ಪ ರೋಟರಿ ಕ್ಲಬ್‌ಗೆ ರೋಟರಿ ಇಂಟರ್‌ನ್ಯಾಷನಲ್ ವತಿಯಿಂದ ‘ಪ್ಲಾಟಿನಮ್ ಪ್ಲಸ್ ಅವಾರ್ಡ್’ ಪ್ರದಾನ ಮಾಡಲಾಗಿದೆ.

ಮೈಸೂರಿನಲ್ಲಿ ನಡೆದ ಅನುಭವ ಅವಾರ್ಡ್ ಕಾರ್ಯಕ್ರಮದಲ್ಲಿ ಗೋಣಿಕೊಪ್ಪ ರೋಟರಿ ಕ್ಲಬ್‌ನ ಅಧ್ಯಕ್ಷ ಪಿ.ಆರ್. ವಿಜಯ್ ಅವರ ನೇತೃತ್ವದ ತಂಡಕ್ಕೆ ಈ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಗವರ್ನರ್ ಪಿ.ಕೆ. ರಾಮಕೃಷ್ಣ ಹಾಗೂ ಸತೀಶ್ ಬೋಳಾರ್ ಅವರಿಂದ ಕ್ಲಬ್ ಅಧ್ಯಕ್ಷ ಪಿ.ಆರ್. ವಿಜಯ್, ಕಾರ್ಯದರ್ಶಿ ಪ್ರಮೋದ್ ಕಾಮತ್ ಹಾಗೂ ಅಸಿಸ್ಟೆಂಟ್ ಗವರ್ನರ್ ದಿಲನ್ ಚಂಗಪ್ಪ ಪ್ರಶಸ್ತಿಯನ್ನು ಸ್ವೀಕರಿಸಿದರು.