ಕುಶಾಲನಗರ, ಜೂ. ೩೦: ವಿಶೇಷ ಮತಪಟ್ಟಿ ಪರಿಷ್ಕರಣೆ ಸಂಬAಧ ಕುಶಾಲನಗರ ತಾಲೂಕು ವ್ಯಾಪ್ತಿಯ ಕಾಂಗ್ರೆಸ್ ಪಕ್ಷದ ವಿವಿಧ ಬೂತ್‌ಗಳ ಪ್ರಮುಖರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.
ಕುಶಾಲನಗರ ಎ.ಪಿ.ಸಿ.ಎಂ.ಎಸ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜಾಗೃತ ಕರ್ನಾಟಕ ಸಂಸ್ಥೆಯ ತಜ್ಞರು ವಿಶೇಷ ಮತ ಪಟ್ಟಿ ಪರಿಷ್ಕರಣೆ (SIಖ) ಬಗ್ಗೆ ವಿವರಣೆ ಸಹಿತ ಮಾಹಿತಿ ಒದಗಿಸಿದರು.
ಈ ಸಂದರ್ಭ ವಹಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಸಮಾಲೋಚನೆ ಮತ್ತು ಸಂವಾದ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಕ್ಷೇತ್ರದ ಶಾಸಕರಾದ ಡಾ ಮಂತರ್ ಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿ.ಪಿ ಶಶಿಧರ್, ಪ್ರಮುಖರಾದ ಕೆ.ಪಿ ಚಂದ್ರಕಲಾ, ಚಂದ್ರಮೌಳಿ, ನಟೇಶ್ ಗೌಡ, ಪುಷ್ಪಲತಾ ಸೇರಿದಂತೆ ತಾಲೂಕಿನ ನೂರು ಬೂತ್‌ಗಳ ವ್ಯಾಪ್ತಿಯಿಂದ ಪಕ್ಷದಿಂದ ನೇಮಕಗೊಂಡ ಬಿ.ಎಲ್.ಎಗಳು ಮತ್ತು ೧೭ ಪಂಚಾಯಿತಿಗಳ ವಲಯ ಅಧ್ಯಕ್ಷರುಗಳು ಪಾಲ್ಗೊಂಡಿದ್ದರು.