ಜುಲೈ ೧ ಪತ್ರಿಕಾ ದಿನ. ವೃತ್ತಪತ್ರಿಕೆಯನ್ನು "ಸಮಾಜದ ಕನ್ನಡಿ" ಎಂದು ಕರೆಯುತ್ತಾರೆ. ಏಕೆಂದರೆ ಅದು ಸಮಾಜದಲ್ಲಿ ನಡೆಯುವ ಒಳಿತು-ಕೆಡುಕುಗಳನ್ನು ನಮ್ಮ ಮುಂದಿಡುತ್ತದೆ. ಬೆಳಿಗ್ಗೆ ಎದ್ದ ತಕ್ಷಣ ನಮ್ಮ ಕೈಗೆ ಸಿಗುವ ಪತ್ರಿಕೆ ಇಡೀ ಜಗತ್ತಿನ ಸುದ್ದಿಯನ್ನು ಹೊತ್ತು ತರುತ್ತದೆ.
ನಮ್ಮ ದೇಶದ ಸ್ವಾತಂತ್ರ‍್ಯ ಹೋರಾಟದಲ್ಲಿ ಪತ್ರಿಕೆಗಳ ಪಾತ್ರ ಬಹಳ ದೊಡ್ಡದು. ಮಹಾತ್ಮ ಗಾಂಧೀಜಿಯವರು 'ಯಂಗ್ ಇಂಡಿಯಾ', ಲೋಕಮಾನ್ಯ ತಿಲಕರು 'ಕೇಸರಿ' ಪತ್ರಿಕೆಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು.
ಇಂದು ಮೊಬೈಲ್, ಟಿವಿ ಬಂದರೂ ಪತ್ರಿಕೆ ಓದುವ ಖುಷಿಯೇ ಬೇರೆ. ಪತ್ರಿಕೆ ಓದುವುದರಿಂದ ನಮ್ಮ ಜ್ಞಾನ ಹೆಚ್ಚುತ್ತದೆ, ಭಾಷೆ ಸುಧಾರಿಸುತ್ತದೆ, ಹೊಸ ವಿಷಯಗಳು ತಿಳಿಯುತ್ತವೆ. ರಾಜಕೀಯ, ಕ್ರೀಡೆ, ವಿಜ್ಞಾನ, ಸಿನಿಮಾ ಎಲ್ಲವೂ ಒಂದೇ ಕಡೆ ಸಿಗುತ್ತದೆ.
ಪತ್ರಕರ್ತರು ಸತ್ಯವನ್ನು ಜನರ ಮುಂದಿಡಲು ಹಗಲು-ರಾತ್ರಿ ದುಡಿಯುತ್ತಾರೆ. ಅವರ ಶ್ರಮಕ್ಕೆ ನಾವು ಗೌರವ ಸಲ್ಲಿಸಬೇಕು. ಪತ್ರಿಕಾ ಸ್ವಾತಂತ್ರ‍್ಯವೇ ಪ್ರಜಾಪ್ರಭುತ್ವದ ಜೀವಾಳ.
ನನ್ನ ನೆಚ್ಚಿನ ದಿನಪತ್ರಿಕೆ ಒಂದಿದೆ ಅದು ಯಾವುದು ಗೊತ್ತೆ.... ಅದೇ ನಮ್ಮ ನಿಮ್ಮೆಲ್ಲರ ಅಚ್ಚು ಮೆಚ್ಚಿನ "ಶಕ್ತಿ " ಪತ್ರಿಕೆ... ಹಾಗಾಗಿ ನಾವೆಲ್ಲರೂ ದಿನಾ ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳೋಣ. ಮೊಬೈಲ್‌ಗೇಮ್ ಬದಲು ದಿನಕ್ಕೆ ೧೦ ನಿಮಿಷ ಪತ್ರಿಕೆ ಓದೋಣ. ನಮ್ಮ ಮಕ್ಕಳಿಗೂ ಈ ಅಭ್ಯಾಸ ಕಲಿಸೋಣ.
ಮನುಷ್ಯ ಪೀಳಿಗೆ ಇರುವವರೆಗೂ ಪತ್ರಿಕೆ ನಿಲ್ಲದಿರಲಿ
- ಕವಿತ ಕಾವ್ಯ