ಸುಂಟಿಕೊಪ್ಪ, ಜು. ೩: ಸುವರ್ಣ ವರ್ಷ ಆಚರಣೆ ಸಂಭ್ರದಲ್ಲಿರುವ ಸುಂಟಿಕೊಪ್ಪ ಲಯನ್ಸ್ ಕ್ಲಬ್‌ಗೆ ಒಂದು ಸ್ವಂತ ಕಟ್ಟಡ ಒದಗಿಸುವುದರೊಂದಿಗೆ ಜನೋಪಯೋಗಿ ಕಾರ್ಯಕ್ರಮಗಳ ಮೂಲಕ ಸಾರ್ಥಕವಾಗಿ ಆಚರಿಸಲಾಗುವುದೆಂದು ಸುಂಟಿಕೊಪ್ಪ ಲಯನ್ಸ್ನ ನೂತನ ಅಧ್ಯಕ್ಷ ಎಸ್.ಜಿ ಶ್ರೀನಿವಾಸ್ ಹೇಳಿದರು.
ಗುಂಡುಗುಟ್ಟಿ ಮಂಜನಾಥಯ್ಯ ಸಭಾಂಗಣದಲ್ಲಿ ನಡೆದ ೨೦೨೬-೨೭ನೇ ಸಾಲಿನ ಲಯನ್ಸ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ಮಾತನಾಡಿದ ಅವರು, ಆರೋಗ್ಯ ತಪಾಸಣಾ ಶಿಬಿರ, ಕೃಷಿ ಕುರಿತಾದ ಕಾರ್ಯಾಗಾರ, ರೈತರಿಗೆ ಸರಕಾರದ ವಿವಿಧ ಇಲಾಖೆಗಳ ಮೂಲಕ ಸಿಗುವ ಸಹಾಯ, ಸವಲತ್ತುಗಳ ಕುರಿತು ಮಾರ್ಗದರ್ಶನ ಶಿಬಿರ ಆಯೋಜಿಸಲಾಗುವುದೆಂದು ಹೇಳಿದರು.
ಪದಗ್ರಹಣ ಮತ್ತು ಪ್ರತಿಜ್ಞಾವಿಧಿ ಭೋದಿಸಿದ ಲಯನ್ಸ್ ಇಂಟರ್‌ನ್ಯಾಷನಲ್ ಸಂಸ್ಥೆಯ ಜಿಲ್ಲಾ ೩೧೭೦ರ ಮೊದಲ ಜಿಲ್ಲಾ ಉಪರಾಜ್ಯಪಾಲ ಗೋವರ್ಧನ್ ಶೆಟ್ಟಿ ಮಾತನಾಡಿ, ಹಿರಿಯ ಮತ್ತು ನೂತನ ಸದಸ್ಯರು ಸುಂಟಿಕೊಪ್ಪ ಲಯನ್ಸ್ನಲ್ಲಿದ್ದು, ಸಂಸ್ಥಾಪಕ ಸದಸ್ಯರು ಕೂಡ ಕಳೆದ ಅರ್ಧಶತಮಾನದಿಂದ ಸಂಸ್ಥೆಯನ್ನು ಪ್ರಗತಿ ಪಥದಲ್ಲಿ ನಡೆಸಿಕೊಂಡು ಬಂದಿರುವುದು ಶ್ಲಾಘನೀಯ ವಿಚಾರವೆಂದರು. ಶಿಕ್ಷಣ ಆರೋಗ್ಯ ಮತ್ತು ಇತರ ಮಾನವೀಯ ಸೇವೆಗಳಿಗೆ ಲಯನ್ಸ್ನಲ್ಲಿ ಸಾಕಷ್ಟು ಅನುದಾನ ಲಭ್ಯವಿದ್ದು ಇದನ್ನು ಪಡೆದು ಸಮಾಜಮುಖಿಯಾಗಿ ಸಂಸ್ಥೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವAತೆ ಗೋವರ್ಧನ್ ಶೆಟ್ಟಿ ಕರೆ ನೀಡಿದರು. ಇದೇ ಸಂದರ್ಭ ನೂತನ ಕಾರ್ಯದರ್ಶಿಯಾಗಿ ಗ್ಲೆನ್ ಮೆನೇಜಸ್ ಮತ್ತು ಖಜಾಂಚಿಯಾಗಿ ಕೆ.ಪಿ ಜಗನ್ನಾಥ್ ಅವರಿಗೆ ಪದಗ್ರಹಣ ಪ್ರತಿಜ್ಞಾ ವಿಧಿ ಭೋದಿಸಿದರು.
ರಾಷ್ಟಿçÃಯ ವೈದ್ಯರ ದಿನದ ಹಿನ್ನಲೆಯಲ್ಲಿ ಸುಂಟಿಕೊಪ್ಪದ ಹಿರಿಯ ವೈದ್ಯ ಹಾಗೂ ಸುಂಟಿಕೊಪ್ಪ ಲಯನ್ಸ್ ಸಂಸ್ಥೆಯ ಸಂಸ್ಥಾಪಕರಲ್ಲಿ ಒಬ್ಬರಾದ ಡಾ.ಯಶೋಧರ ಪೂಜಾರಿ ಅವರ ಪತ್ನಿ ಅಂಜಲಿ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಲಯನ್ಸ್ ಸುಂಟಿಕೊಪ್ಪ ಸಂಸ್ಥಾಪಕ ಸದಸ್ಯ ಕೆ.ಡಿ.ರಾಮಯ್ಯ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಬೆಂಗಳೂರು, ಮೈಸೂರು, ಕಾರ್ಕಳ, ಉಡುಪಿ, ಮಂಗಳೂರು ಭಾಗಗಳಿಂದ ಆಗಮಿಸಿದ್ದ ಲಯನ್ಸ್ ಪದಾಧಿಕಾರಿಗಳು ನೂತನ ತಂಡಕ್ಕೆ ಶುಭಕೋರಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿರ್ಗಮಿತ ಅಧ್ಯಕ್ಷರಾದ ರಕ್ಷಿತ್ ಚೆಟ್ಟಿಮಾಡ ವಹಿಸಿದ್ದರು.
ಕಾರ್ಯದರ್ಶಿ ಗ್ಲೇನ್ ಮ್ಯಾನೇಜೆಸ್ ಮತ್ತು ಖಜಾಂಚಿ ಟಿ.ಆರ್ ಜಯದೇವ್ ಸೇರಿದಂತೆ ವಿವಿಧ ಪದಾಧಿಕಾರಿಗಳು ಪಾಲ್ಗೊಂಡಿದ್ದರು.