ಶನಿವಾರಸಂತೆ, ಜು. ೧೧ : ಸಮೀಪದ ಕೊಡ್ಲಿಪೇಟೆ ಹೋಬಳಿ, ಬೆಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೀರುಗುಂದ ಗ್ರಾಮದಲ್ಲಿ ಮೀನು ಹಿಡಿಯಲು ತೆರಳಿ ಕಣ್ಮರೆಯಾದ ಇಬ್ಬರು ವ್ಯಕ್ತಿಗಳು ಕಣ್ಮರೆಯಾಗಿರುವ ಹಿನ್ನೆಲೆ ಪತ್ತೆಗಾಗಿ ಶೋಧ ಕಾರ್ಯ ಶನಿವಾರವೂ ಮುಂದುವರೆದಿದ್ದು ಸಂಜೆಯಾದರೂ ಯಾವುದೇ ಸುಳಿವು ಸಿಗಲಿಲ್ಲ.
ಗ್ರಾಮದ ನಿವಾಸಿಗಳಾದ ಶಿವರಾಜ್ (೫೦) ಹಾಗೂ ಎನ್.ಬಿ.ನಾಗರಾಜ್ (೪೫) ಗುರುವಾರ ರಾತ್ರಿ ಗ್ರಾಮದ ಹೇಮಾವತಿ ನದಿ ಹಿನ್ನೀರಿನ ಹೊಳೆ ಸಾಲಿನಲ್ಲಿ ಮೀನು ಹಿಡಿಯಲು ತೆರಳಿದ್ದು ಶುಕ್ರವಾರ ಬೆಳಗ್ಗೆಯಾದರೂ ಹಿಂದಿರುಗದೆ ಕಣ್ಮರೆಯಾಗಿದ್ದು ಶುಕ್ರವಾರ ಆರಂಭವಾಗಿದ್ದ ಶೋಧ ಕಾರ್ಯ ಶನಿವಾರವೂ ನಡೆಯಿತು.
ಸೋಮವಾರಪೇಟೆ ತಹಶಿಲ್ದಾರ್ ಕೃಷ್ಣಮೂರ್ತಿ ಹಾಗೂ ಡಿವೈಎಸ್ಪಿ ಚಂದ್ರಶೇಖರ್ ಸ್ಥಳಕ್ಕೆ ಭೇಟಿ ನೀಡಿ ಕಾರ್ಯಾಚರಣೆ ವೀಕ್ಷಿಸಿದರು. ಶನಿವಾರಸಂತೆ ಪೊಲೀಸ್ ಠಾಣೆ ಪಿಎಐ ಹೆಚ್.ವೈ.ಚಂದ್ರ, ಸಿಬ್ಬಂದಿ ಕೀರ್ತಿ, ಸಂತೋಷ್, ಹರ್ಷ, ಕೊಡ್ಲಿಪೇಟೆ ಉಪ ಪೊಲೀಸ್ ಠಾಣೆ ಎಎಐ ಲಕ್ಷಿö್ಮÃಪ್ರಸಾದ್ ರೈ, ಸಿಬ್ಬಂದಿ ಮೂರ್ತಿ, ಗ್ರಾಮಸ್ಥರು ಸ್ಥಳದಲ್ಲೇ ಇದ್ದು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಸೋಮವಾರಪೇಟೆ ಅಗ್ನಿ ಶಾಮಕ ದಳ, ಎನ್‌ಡಿಆರ್‌ಎಫ್, ಪೊಲೀಸ್ ಇಲಾಖೆ ಜಂಟಿಯಾಗಿ ಕಾರ್ಯಾಚರಣೆ ಕೈಗೊಂಡಿವೆ.