ಗೋಣಿಕೊಪ್ಪಲು, ಜು. ೧೧: ಇತ್ತೀಚೆಗೆ ಸುರಿದ ಮಳೆಯಿಂದಾಗಿ, ಗೋಣಿಕೊಪ್ಪ - ಪೊನ್ನಂಪೇಟೆ ಮುಖ್ಯರಸ್ತೆಯ ಸೇತುವೆಯ ಕೆಳಭಾಗದಲ್ಲಿರುವ ಒಂದು ಭಾಗದ ತಡೆಗೋಡೆಯು ಕುಸಿದು ಬಿದ್ದಿದ್ದು, ರೆವಿನ್ಯೂ ಇಲಾಖೆಯ ಅಧಿಕಾರಿಗಳು, ಪಂಚಾಯಿತಿ ಪಿಡಿಓ ಹಾಗೂ ಪಂಚಾಯಿತಿ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸ್ಥಳೀಯ ಖಾಸಗಿ ಲಾಡ್ಜ್ನ ಕಟ್ಟಡಕ್ಕೆ ಹೊಂದಿಕೊAಡಿರುವ ಸೇತುವೆಯಲ್ಲಿ ಹರಿಯುವ ನೀರಿನ ರಭಸಕ್ಕೆ ತಡೆಗೋಡೆಗೆ ಕಟ್ಟಲಾಗಿದ್ದ ಕಲ್ಲುಗಳು ಕುಸಿದಿವೆ. ಲಾಡ್ಜ್ಗೆ ಬರುವ ಪ್ರವಾಸಿಗರ ತಂಗುವಿಕೆಗೆ ಸಂಬAಧಿಸಿದAತೆ ಎಚ್ಚರಿಕೆ ವಹಿಸಬೇಕು ಎಂದು ಮಾಲೀಕರಿಗೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಪಿಡಿಓ ತಿಮ್ಮಯ್ಯ, ಪಂಚಾಯಿತಿ ಸದಸ್ಯರಾದ ಹಕ್ಕಿಂ, ಆರ್.ಐ. ರವೀಂದ್ರ ಸೇರಿದಂತೆ ಇತರರು ಪರಿಶೀಲನೆ ವೇಳೆ ಉಪಸ್ಥಿತರಿದ್ದರು.