ವೀರಾಜಪೇಟೆ, ಜು. ೧೧: ಪ್ರಸಕ್ತ ಸಾಲಿನಲ್ಲಿ ನಡೆಯುವ ೨ನೇ ವರ್ಷದ ಕೊಡವ ಕುಟುಂಬಗಳ ತೋಕ್ ನಮ್ಮೆ ಸ್ಪರ್ಧೆಯನ್ನು, ಆಲೆಮಾಡ ಕುಟುಂಬಸ್ಥರು ಆಯೋಜಿಸುತ್ತಿದ್ದು, ಶಾಸಕರ ಗೃಹ ಕಚೇರಿಯಲ್ಲಿ ಈ ಬಾರಿಯ ತೋಕ್ ನಮ್ಮೆಯ ಲಾಂಛನವನ್ನು ಬಿಡುಗಡೆಗೊಳಿಸಲಾಯಿತು.

ಲಾಂಛನವನ್ನು ಬಿಡುಗಡೆಗೊಳಿಸಿ ಮಾತನಾಡಿದ ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ, ಕೊಡಗಿನ ಗೌರವದ ಸಂಕೇತವಾದ ಬಂದೂಕಿಗೆ ಸಂಬAಧಿಸಿದ ಈ ಸ್ಪರ್ಧೆಯು, ನಾಡಿನ ಹಾಗೂ ಸಮುದಾಯದ ಗೌರವವನ್ನು ಸಮಾಜದಲ್ಲಿ ಮತ್ತಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯಲಿ ಎಂದು ಹಾರೈಸಿದರು.

ಈ ಸಂದರ್ಭ ಆಲೆಮಾಡ ಸೋಮಣ್ಣ, ಆಲೆಮಾಡ ತೋಕ್ ನಮ್ಮೆಯ ಆಯೋಜಕರು, ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.