ತೋಟಗಾರಿಕಾ ಕೇಂದ್ರಕ್ಕೆ ಐಜಿಪಿ ಭೇಟಿ
ಚೆಟ್ಟಳ್ಳಿ, ಜು. ೧೧ : ರಾಜ್ಯ ಆಂತರಿಕ ರಕ್ಷಣಾ ವಿಭಾಗದ ಐಜಿಪಿ ವಿಕಾಸ್ ಕುಮಾರ್ ಅವರು ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರಕ್ಕೆ ಭೇಟಿ ನೀಡಿದರು. ತೋಟಗಾರಿಕಾ ಬೆಳೆಗಳು ಹಣ್ಣಿನ ಬಗ್ಗೆ ಕೇಂದ್ರದ ಸಿಬ್ಬಂದಿ ಮಾಹಿತಿ ನೀಡಿದರು. ಈ ಸಂದರ್ಭ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಹಾಗೂ ಚೆಟ್ಟಳ್ಳಿ ಉಪಠಾಣಾಧಿಕಾರಿ ಮೊಣ್ಣಪ್ಪ ಹಾಜರಿದ್ದರು.