ಮಡಿಕೇರಿ, ಜು. ೧೧ : ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದಿಂದ ೨೦೨೫-೨೬ನೇ ಸಾಲಿಗೆ ಪರಿಶಿಷ್ಟ ಜಾತಿಯ ಜನರ ಆರ್ಥಿಕ ಅಭಿವೃದ್ಧಿಗಾಗಿ ಸಫಾಯಿ ಕರ್ಮಚಾರಿ ಮತ್ತು ಮ್ಯಾನ್ಯುವೆಲ್ ಸ್ಕಾವೆಂರ‍್ಸ್ ಹಾಗೂ ಅವರ ಅವಲಂಬಿತರ ಫಲಾಪೇಕ್ಷಿಗಳಿಂದ ಸ್ವಯಂ ಉದ್ಯೋಗ ನೇರಸಾಲ ಯೋಜನೆ, ಕುರಿ ಸಾಕಾಣಿಕೆ ನೇರ ಸಾಲ ಯೋಜನೆ, ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಲ್ಲಿ ಸದಸ್ಯತ್ವ ಹೊಂದಲು, ಉದ್ಯಮ ಶೀಲತಾ ಅಭಿವೃದ್ಧಿ ಯೋಜನೆ, ಸ್ವಾವಲಂಬಿ ಸಾರಥಿ ಯೋಜನೆ, ಲ್ಯಾಪ್‌ಟಾಪ್ ವಿತರಣೆ, ಹೀಗೆ ವಿವಿಧ ಯೋಜನೆಗಳಡಿ ಸಾಲ ಸೌಲಭ್ಯಕ್ಕೆ ಈಗಾಗಲೇ ಅರ್ಜಿ ಆಹ್ವಾನಿಸಲಾಗಿದ್ದು, ಈ ಯೋಜನೆಯಡಿಯಲ್ಲಿ ಅರ್ಜಿ ಸ್ವೀಕೃತಗೊಳ್ಳದೇ ಇರುವುದರಿಂದ ಮತ್ತೊಮ್ಮೆ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ತಾ. ೩೦ ಕೊನೆಯ ದಿನವಾಗಿದೆ. ಸಫಾಯಿ ಕರ್ಮಚಾರಿಗಳಿಗೆ ಸ್ವಯಂ ಉದ್ಯೋಗ ನೇರಸಾಲ ಯೋಜನೆಯಡಿ ಅರ್ಹ ನಿರುದ್ಯೋಗಿ ಫಲಾಪೇಕ್ಷಿಗಳು ಸ್ವಯಂ ಉದ್ಯೋಗದಲ್ಲಿ ತೊಡಗಿಸಿಕೊಳ್ಳಲು ಕಿರು ಆರ್ಥಿಕ ಚಟುವಟಿಕೆಯ ಉದ್ದೇಶಗಳಿಗೆ ನಿಗಮಗಳಿಂದ ನೇರ ಸಾಲ ಗರಿಷ್ಠ ವೆಚ್ಚ ರೂ. ೧ ಲಕ್ಷ, ಅದರಲ್ಲಿ ಶೇ. ೫೦ ಸಾಲ ಮತ್ತು ಶೇ. ೫೦ ಸಹಾಯಧನ (ಶೇ.೪ ರಷ್ಟು ಬಡ್ಡಿ ದರ). ಕುರಿ ಸಾಕಾಣಿಕೆ ನೇರಸಾಲ ಯೋಜನೆಯಡಿ ಅರ್ಹ ನಿರುದ್ಯೋಗಿ ಫಲಾಪೇಕ್ಷಿಗಳು ಸ್ವಯಂ ಉದ್ಯೋಗದಲ್ಲಿ ತೊಡಗಿಸಿಕೊಳ್ಳಲು ಕಿರು ಆರ್ಥಿಕ ಚಟುವಟಿಕೆಯ ಉದ್ದೇಶಗಳಿಗೆ ನಿಗಮಗಳಿಂದ ನೇರ ಸಾಲ ಗರಿಷ್ಠ ವೆಚ್ಚ ರೂ. ೧ ಲಕ್ಷ, ಅದರಲ್ಲಿ ಶೇ. ೫೦ ಸಾಲ ಮತ್ತು ಶೇ. ೫೦ ಸಹಾಯಧನ(ಶೇ.೪ ರಷ್ಟು ಬಡ್ಡಿ ದರ). ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಲ್ಲಿ ಸದಸ್ಯತ್ ಹೊಂದಲು ಅರ್ಜಿ ಆಹ್ವಾನ. ಮ್ಯಾನ್ಯುವೆಲ್ ಸ್ಕಾವೆಂಜರ್‌ಗಳಿಗೆ ಸ್ವಯಂ ಉದ್ಯೋಗ ನೇರ ಸಾಲ ಯೋಜನೆಯಡಿ ಅರ್ಹ ನಿರುದ್ಯೋಗಿ ಫಲಾಪೇಕ್ಷಿಗಳು ಸ್ವಯಂ ಉದ್ಯೋಗದಲ್ಲಿ ತೊಡಗಿಸಿಕೊಳ್ಳಲು ಕಿರು ಆರ್ಥಿಕ ಚಟುವಟಿಕೆಯ ಉದ್ದೇಶಗಳಿಗೆ ನಿಗಮಗಳಿಂದ ನೇರ ಸಾಲ ಗರಿಷ್ಠ ವೆಚ್ಚ ರೂ. ೧ ಲಕ್ಷ, ಅದರಲ್ಲಿ ಶೇ. ೫೦ ಸಾಲ ಮತ್ತು ಶೇ. ೫೦ ಸಹಾಯಧನ(ಶೇ. ೪ ರಷ್ಟು ಬಡ್ಡಿ ದರ). ಕುರಿ ಸಾಕಾಣಿಕೆ ನೇರಸಾಲ ಯೋಜನೆಯಡಿ ಅರ್ಹ ನಿರುದ್ಯೋಗಿ ಫಲಾಪೇಕ್ಷಿಗಳು ಸ್ವಯಂ ಉದ್ಯೋಗದಲ್ಲಿ ತೊಡಗಿಸಿಕೊಳ್ಳಲು ಕಿರು ಆರ್ಥಿಕ ಚಟುವಟಿಕೆಯ ಉದ್ದೇಶಗಳಿಗೆ ನಿಗಮಗಳಿಂದ ನೇರ ಸಾಲ ಗರಿಷ್ಠ ವೆಚ್ಚ ರೂ. ೧ ಲಕ್ಷ, ಅದರಲ್ಲಿ ಶೇ. ೫೦ ಸಾಲ ಮತ್ತು ಶೇ. ೫೦ ಸಹಾಯಧನ(ಶೇ. ೪ ರಷ್ಟು ಬಡ್ಡಿ ದರ). ಉದ್ಯಮ ಶೀಲತಾ ಅಭಿವೃದ್ಧಿ ಯೋಜನೆಯಡಿ (ಬ್ಯಾಂಕುಗಳ ಸಹಯೋಗದೊಂದಿಗೆ) ಹೈನುಗಾರಿಕೆ ಉದ್ದೇಶಕ್ಕಾಗಿ ಬ್ಯಾಂಕ್ ಸಹಯೋಗದೊಂದಿಗೆ ನಿಗಮದಿಂದ ಸಹಾಯಧನ ಗರಿಷ್ಠ ರೂ. ೧.೨೫ ಲಕ್ಷ ನೀಡಲಾಗುತ್ತದೆ. ಉಳಿದ ಮೊತ್ತ ಬ್ಯಾಂಕ್ ಸಾಲವಾಗಿರುತ್ತದೆ. ಸ್ವಾವಲಂಬಿ ಸಾರಥಿ ಯೋಜನೆಯಡಿ ಸರಕು ವಾಹನ/ಟ್ಯಾಕ್ಸಿ ಖರೀದಿಸುವ ಉದ್ದೇಶಕ್ಕೆ ಘಟಕ ವೆಚ್ಚದ ಶೇ. ೭೫ ರಷ್ಟು ಸಹಾಯಧನ ಅಥವಾ ಗರಿಷ್ಠ ರೂ. ೪ ಲಕ್ಷ ಆಗಿರುತ್ತದೆ.

ಲ್ಯಾಪ್ ಟಾಪ್ ವಿತರಣೆ : ಲ್ಯಾಪ್ ಟಾಪ್ ವಿತರಣೆಯನ್ನು ಮ್ಯಾನ್ಯುಯಲ್ ಸ್ಕಾವೆಂರ‍್ಸ್ ಮತ್ತು ಅವರ ಅವಲಂಬಿತರುಗಳ ಮಕ್ಕಳಿಗೆ ಬಿ.ಕಾಂ, ಬಿಎಸ್ಸಿ, ಬಿಬಿಎಂ., ಬಿ.ಇ, ಎಂಬಿಬಿಎಸ್, ಎಂಕಾA, ಎಂಎ, ಎಂಎಸ್ಸಿ, ಎಂಟೆಕ್, ಎಂಬಿಎ ಮತ್ತಿತರ ಉನ್ನತ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ನೀಡಲಾಗುವುದು.

ಅರ್ಜಿಯೊಂದಿಗೆ ಭಾವಚಿತ್ರ, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ರೇಷನ್ ಕಾರ್ಡ್, ಗುರುತಿನ ಚೀಟಿ, ಬ್ಯಾಂಕ್ ಪಾಸ್ ಪುಸ್ತಕ ದಾಖಲಾತಿಗಳೊಂದಿಗೆ ಅರ್ಜಿಯನ್ನು ತಾ. ೩೦ ರೊಳಗೆ ಸಲ್ಲಿಸಿ ಒಂದು ಪ್ರತಿಯನ್ನು ನಿಗಮದ ಜಿಲ್ಲಾ ಕಚೇರಿಗೆ ಸಲ್ಲಿಸುವಂತೆ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ, ಹೊಸ ಬಡಾವಣೆ, ಮಡಿಕೇರಿ, ಕೊಡಗು ಜಿಲ್ಲೆ-೫೭೧೨೦೧ ದೂ.ಸಂ. ೮೦೫೦೮೫೪೦೬೧ ನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.