*ಗೋಣಿಕೊಪ್ಪ, ಜು. ೧೧ : ತಿತಿಮತಿ ಮತ್ತಿಗೋಡು ಆನೆ ಶಿಬಿರದ ಸಾಕಾನೆ ‘ರೋಹಿತ್’ ಅರಣ್ಯ ಇಲಾಖೆಯ ತಪಾಸಣಾ ಗೇಟಿನ ಬಳಿ ಸಂಚರಿಸಿ ಪ್ರವಾಸಿಗರ ಗಮನ ಸೆಳೆದಿದೆ.
ತಪಾಸಣಾ ಗೇಟಿನ ಸಮೀಪದ ಅರಣ್ಯ ಇಲಾಖೆಯ ಕಚೇರಿಯ ಬಾಗಿಲನ್ನು ಸೊಂಡಿಲಿನಿAದ ತಳ್ಳುವ ರೋಹಿತ್‌ನ ವಿಡಿಯೋವನ್ನು ಕೆಲ ಪ್ರವಾಸಿಗರು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊAಡಿದ್ದಾರೆ. ಬಳಿಕ ಈ ವಿಷಯವನ್ನು ಅರಣ್ಯ ಇಲಾಖೆಯ ಗಮನಕ್ಕೂ ತಂದಿದ್ದಾರೆ.
ಅರಣ್ಯ ಇಲಾಖೆಯ ಮಾಹಿತಿ ಪ್ರಕಾರ, ಶಿಬಿರದ ಸಾಕಾನೆಗಳು ಕೆಲವೊಮ್ಮೆ ರಾತ್ರಿ ವೇಳೆಯಲ್ಲಿ ಶಿಬಿರದಿಂದ ಸ್ವಲ್ಪ ದೂರದವರೆಗೆ ಸಂಚರಿಸುವುದು ಸಾಮಾನ್ಯ. ಅವುಗಳು ಸಾಮಾನ್ಯವಾಗಿ ಯಾವುದೇ ರೀತಿಯ ಅನಾಹುತ ಅಥವಾ ಹಾನಿ ಉಂಟುಮಾಡುವುದಿಲ್ಲ ಎಂದು ವಲಯ ಅರಣ್ಯ ಅಧಿಕಾರಿ ಗಂಗಾಧರ್ ತಿಳಿಸಿದ್ದಾರೆ.
ರೋಹಿತ್‌ನ ಈ ರಾತ್ರಿ ಸಂಚಾರ ಮತ್ತು ಕಚೇರಿಯ ಬಾಗಿಲು ತಳ್ಳುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರವಾಸಿಗರಲ್ಲಿ ಕುತೂಹಲ ಮೂಡಿಸಿದೆ. -ಎನ್.ಎನ್. ದಿನೇಶ್