ಚೆಯ್ಯಂಡಾಣೆ, ಜು. ೧೨: ಒಂದೆಡೇ ಬಿಟ್ಟು ಬಿಟ್ಟು ಸುರಿಯುತ್ತಿರುವ ಮಳೆ,ಅಲ್ಪ ಸ್ವಲ್ಪ ಭೂಕುಸಿತ, ಇದರ ಮಧ್ಯೆ ತೋಟಕ್ಕೆ ಹಾಗೂ ನಾಡಿಗೆ ಎಂಟ್ರಿ ಕೊಡುತ್ತಿರುವ ಕಾಡಾನೆಗಳ ಹಿಂಡು ಇದು ಜಿಲ್ಲೆಯ ಮಡಿಕೇರಿ ತಾಲೂಕಿನ ನರಿಯಂದಡ ಗ್ರಾಮ ಪಂಚಾಯಿತಿಗೆ ಒಳಪಟ್ಟ ಚೆಯ್ಯಂಡಾಣೆಯಲ್ಲಿ ದಿನನಿತ್ಯದ ಗೋಳಾಗಿದೆ.

ಕಳೆದ ಕೆಲವು ವರ್ಷಗಳಿಂದ ಇಲ್ಲಿನ ತೋಟಗಳು ಕಾಡಾನೆಗಳ ವಾಸ ಸ್ಥಳವಾಗಿ ಮಾರ್ಪಟ್ಟಿದೆ. ಅರಣ್ಯದಲ್ಲಿ ಕಾಡಾನೆಗಳಿಗೆ ಆಹಾರ ವಿಲ್ಲದೆ ಆಹಾರ ಅರಸಿ ಅದು ನಾಡಿನತ್ತ ಪಯಣ ಬೆಳಿಸಿ ಇಲ್ಲಿನ ರೈತರ ತೋಟಗಳಿಗೆ ಲಗ್ಗೆ ಇಟ್ಟು ಅಪಾರ ಪ್ರಮಾಣದ ಕೃಷಿ ಗಿಡಗಳನ್ನು ಹಾನಿ ಪಡಿಸುತ್ತಿದೆ. ಕೆಲವು ಆನೆಗಳು ತೋಟಗಳಲ್ಲಿಯೇ ಮರಿಗೆ ಜನ್ಮ ನೀಡುವುದು ಸರ್ವೇ ಸಾಮಾನ್ಯವಾಗಿದೆ.

ಈ ವ್ಯಾಪ್ತಿಯ ರೈತರ ಕೆರೆ, ಬಾವಿಗಳಲ್ಲಿ ಕಾಡಾನೆ ಹಾಗೂ ಅದರ ಮರಿಗಳು ಬಿದ್ದು ಮೇಲೆ ಬರಲು ಹರಸಾಹಸ ಪಟ್ಟು ಮೇಲೆ ಬರದೇ ಸಾವನಪ್ಪಿದ ಹಲವಾರು ಘಟನೆಗಳು ಕಳೆದ ಹಲವು ವರ್ಷಗಳಿಂದ ನಡೆಯುತ್ತಿದೆ. ತೋಟಕ್ಕೆ ಆಳವಡಿಸಿದ ಸ್ಲಿಂಕ್ಲರ್ ಪೈಪ್, ಬತ್ತದ ಪೈರು ಬರಿತಾ ಗದ್ದೆಗಳನ್ನೆಲ್ಲ ತುಳಿದು ನಾಶಪಡಿಸುತಿರುತ್ತದೆ.

ಈ ವ್ಯಾಪ್ತಿಯಲ್ಲಿ ಮಾಜಿ ಸೈನಿಕನ ಮೇಲೆ ದಾಳಿ, ಸರ್ಕಾರಿ ಉದ್ಯೋಗಿಯ ಮೇಲೆ ದಾಳಿ, ಹೂ ಕೀಳುವ ಸಂದರ್ಭ ಮಹಿಳೆಯ ಮೇಲೆ ದಾಳಿ ಇಂತಹ ಹಲವಾರು ದಾಳಿಗಳು ನಡೆದರು ಇಲಾಖೆ ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ. ಇದಕೆಲ್ಲ ಕಾರಣ ಯಾರು ಎಂಬುದು ಜನರ ಪ್ರಶ್ನೆ ?

ಕಾರ್ಮಿಕರು ತೋಟಗಳಿಗೆ ತೆರಳದ ಪರಿಸ್ಥಿತಿ ನಿರ್ಮಾಣವಾಗಿದೆ, ಶಾಲಾ ಕಾಲೇಜು ವಿದ್ಯಾರ್ಥಿಗಳು ಶಾಲೆಗಳಿಗೆ ತೆರಳಲು ಭಯ ಪಡುವಂತಾಗಿದೆ, ರಾತ್ರಿ ವೇಳೆ ಮನೆಯಿಂದ ಹೊರ ಬರಲು ಹೆದರಿಕೆ, ವಾಹನಗಳಲ್ಲಿ ರಾತ್ರಿ, ಹಾಗೂ ಆಗಲು ಕೂಡ ಸಂಚರಿಸಲು ಭಯದ ವಾತಾವರಣ, ಮನೆಯ ಅಂಗಳದಲ್ಲಿ ವಾಹನ ನಿಲ್ಲಿಸಿದರೆ ಅದನ್ನು ಹಾನಿಪಡಿಸುವ ಭಯ.

ಕಳೆದ ಕೆಲವು ತಿಂಗಳುಗಳಿAದ ನಮ್ಮ ಗ್ರಾಮದಲ್ಲೇ ಆನೆಗಳು ಸಂಚರಿಸುತ್ತಿದೆ. ಒಂದು ತಂಡದಲ್ಲಿ ಮೂರಕ್ಕೂ ಅಧಿಕ ಆನೆ, ಮತ್ತೊಂದು ತಂಡದಲ್ಲಿ ೫ಕ್ಕೂ ಮಿಕ್ಕ ಆನೆ ಹಾಗೂ ಒಂದು ಒಂಟಿ ಸಲಗ ನಿರಂತರ ತೋಟದಲ್ಲಿ ದಾಳಿ ಮಾಡುತ್ತಿದೆ,

ಇಲಾಖೆಯವರು ಬಂದು ವೀಕ್ಷಿಸಿ ತೆರಳುತ್ತಾರೆ ಅಷ್ಟೇ. ನಮಗೆ ಶಾಶ್ವತ ಪರಿಹಾರ ಬೇಕು ನಾವು ಇಲಾಖೆಗೆ ಹೋಗಿ ಅರ್ಜಿ ಕೊಟ್ಟು ನಷ್ಟ ಪರಿಹಾರವನ್ನು ಕೇಳುವುದು ರೈತರ ಕೆಲಸವಲ್ಲ, ಇಲಾಖೆಯವರು ರೈತರ ಜಮೀನಿಗೆ ಬಂದು ನಷ್ಟವನ್ನು ಅಂದಾಜಿಸಿ ಅವರೇ ಪರಿಹಾರವನ್ನು ಒದಗಿಸಬೇಕು, ನಮ್ಮನ್ನು ಇಲಾಖೆಗೆ ಅಲೆಯುವಂತೆ ಮಾಡುವುದು ಸರಿಯಲ್ಲ, ಇಲಾಖೆಯಿಂದ ಫಾರೆಸ್ಟರ್ ಮತ್ತು ಕ್ಯಾಂಪ್ ಸಿಬ್ಬಂದಿಗಳು ಬರುತ್ತಾರೆ ಆದರೆ ಅವರೊಂದಿಗೆ ಯಾವುದೇ ರಕ್ಷಣೆಯ ವಸ್ತುಗಳು ಇಲ್ಲ, ಪಟಾಕಿ ಮಾತ್ರ ತೆಗೆದುಕೊಂಡು ಬರುತ್ತಾರೆ ಪಟಾಕಿ ಸಿಡಿಸಿ ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಓಡಿಸಿ ಹೋಗುತ್ತಾರೆ ಎಂಬುದು ಇಲ್ಲಿನ ರೈತಾಪಿ ಹಾಗೂ ತೋಟದ ಮಾಲೀಕರ ಅಳಲು. ಕೂಡಲೇ ಅರಣ್ಯ ಇಲಾಖೆ ಮಾನ್ಯ ಶಾಸಕರು, ಸಂಸದರು ಇದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಹಲವಾರು ಪ್ರತಿಭಟನೆ, ರಸ್ತೆ ತಡೆ ಮಾಡಿ ಯಾವುದೇ ಪ್ರಯೋಜನ ಇದುವರೆಗೂ ಕಂಡಿಲ್ಲ.

ಫÀಲಭರಿತ ವಿವಿಧ ಬಗೆಯ ವಿದೇಶಿ ಹಣ್ಣುಗಿಡಗಳನ್ನು ನೆಟ್ಟು ಫಸಲು ಸಂದರ್ಭ ಅದು ಕಾಡಾನೆಯಿಂದ ನಾಶವಾಗುವುದು ಬೇಸರ ತರಿಸುತ್ತದೆ. ಬೆಲೆ ಬಾಳುವ ಸ್ಲಿಂಕ್ಲರ್ ಪೈಪುಗಳನ್ನು ತುಳಿದು ನಾಶಪಡಿಸಿದೆ.ಕೃಷಿ ಜಮೀನಿಗೆ ಆನೆ ಬರದ ರೀತಿಯಲ್ಲಿ ಶಾಶ್ವತ ಪರಿಹಾರ ಕಲ್ಪಿಸಿ ಕೊಡಬೇಕು.ಆನೆಯ ಜಾಗಕ್ಕೆ ಕೃಷಿಕರು ಅಥವಾ ರೈತರು ಹೋಗಲಿಲ್ಲ, ಕೃಷಿ ಜಮೀನಿಗೆ ಆನೆ ಮತ್ತು ಇತರ ಪ್ರಾಣಿಗಳು ದಾಳಿ ಮಾಡುತ್ತಿದೆ ಇದು ಆನೆ ಮಾನವ ಸಂಘರ್ಷ ಅಲ್ಲ,ಮಾನವನ ಮೇಲೆ ಪ್ರಾಣಿಗಳು ಮಾಡುತ್ತಿರುವ ಸಂಘರ್ಷವಾಗಿದೆ. ಕೂಡಲೇ ಅರಣ್ಯಧಿಕಾರಿಗಳು ಸ್ಥಳಕ್ಕೆ ಬಂದು ವೀಕ್ಷಿಸಿ ಸೂಕ್ತ ಪರಿಹಾರ ನೀಡಬೇಕು. ಹಲವಾರು ಬಾರಿ ಅರಣ್ಯ ಇಲಾಖೆಗೆ ಘಟನೆಯ ಬಗೆ ಮಾಹಿತಿ ನೀಡಿದರು. ಕೂಡ ಇಷ್ಟರವರೆಗೆ ಯಾವುದೇ ಅಧಿಕಾರಿಗಳು ಸ್ವಂದಿಸುತ್ತಿಲ್ಲ ಕ್ಯಾಂಪ್ ಸಿಬ್ಬಂದಿಗಳನ್ನು ಹೊÀರತುಪಡಿಸಿ.

ನೊಂದ ಪ್ರಗತಿಪರ ಕೃಷಿಕ ಸುಧೀರ್ ಮಕ್ಕಿಮನೆ ಗ್ರಾಮಕ್ಕೆ ಅಧಿಕಾರಿಗಳು ಭೇಟಿ ನೀಡಿದಾಗ ಒಂದು ಆನೆಯನ್ನು ಹಿಡಿಯಲು ೧೦ದಿನಗಳವರೆಗೆ ಅನುಮತಿ ಪಡೆದು ಬರುವೆ ಎಂದು ತೆರಳಿದ ಅಧಿಕಾರಿಗಳು ೧೦ಕ್ಕೂ ಅಧಿಕ ಆನೆಗಳನ್ನು ಪುನಃ ತೋಟಕ್ಕೆ ಬಿಟ್ಟಿದ್ದಾರೆ. -ಅಶ್ರಫ್