ಗೋಣಿಕೊಪ್ಪ, ಜು. ೧೨: ಇಲ್ಲಿನ ರಾಜೇಶ್ವರಿ ವಿದ್ಯಾನಿಕೇತನ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ೨೦೨೬-೨೭ನೇ ಸಾಲಿನ ಶಾಲಾ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭ ಇತ್ತೀಚೆಗೆ ವಿಜೃಂಭಣೆಯಿAದ ನೆರವೇರಿತು.
ವಿದ್ಯಾರ್ಥಿ ಸಂಘದ ನಾಯಕರಾಗಿ ಜಿ.ಎಂ. ಧನುಷ್, ಪವನ್ ದೇವ್, ನಾಯಕಿಯರಾಗಿ ಬಿ.ಎಸ್. ತನುಶ್ರೀ, ಮಂಜುಳಾ ಹಾಗೂ ವಿವಿಧ ಖಾತೆಗಳ ಪದಾಧಿಕಾರಿಗಳು ಪ್ರಮಾಣವಚನ ಸ್ವೀಕರಿಸಿದರು. ಮುಖ್ಯೋಪಾಧ್ಯಾಯರಾದ ಶಶಿಧರ್ ಅವರು ಆಯ್ಕೆಯಾದ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು.
ಸಂಸ್ಥೆಯ ಮುಖ್ಯೋಪಾಧ್ಯಾಯರಾದ ಶಶಿಧರ್ ಅವರ ಅಧ್ಯP್ಷÀತೆಯಲ್ಲಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಸಂಘದ ಅಧ್ಯP್ಷÀ ಶಶಿಧರ್, ಉಪಾಧ್ಯಕ್ಷರಾದ ಜಿಷಾ ಮತ್ತು ಶಾಂತಿ, ಸಂಸ್ಥೆಯ ವ್ಯವಸ್ಥಾಪಕ ಸುರೇಶ್ ಮೊಣ್ಣಪ್ಪ, ಆಂಗ್ಲ ಮಾಧ್ಯಮ ವಿಭಾಗದ ಸಂಯೋಜಕರಾದ ಶ್ವೇತಾ, ಹಿರಿಯ ಶಿP್ಷÀಕಿ ರಾಣಿ ಹಾಗೂ ಸಂಸ್ಥೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳಿದ್ದರು.
ಕಾರ್ಯಕ್ರಮವನ್ನು ಶಿಕ್ಷಕಿ ಪ್ರೀನಾ ಸ್ವಾಗತಿಸಿದರೆ, ಶಿಕ್ಷಕಿ ದೇವಕಿ ಪ್ರಕಾಶ್ ನಿರೂಪಿಸಿದರೆ, ಶಿಕ್ಷಕಿ ಗೌತಮಿ ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಪ್ರೇಕ್ಷಕರ ಗಮನ ಸೆಳೆಯಿತು.