ಸೋಮವಾರಪೇಟೆ, ಜು. ೧೮: ಬೆಂಗಳೂರಿನ ಚೈಲ್ಡ್ರೈಟ್ಸ್ ಟ್ರಸ್ಟ್ ನೀಡುವ ಯುನಿಸೆಫ್ ನಿಕಟವರ್ತಿ ಮಕ್ಕಳ ಹಕ್ಕುಗಳ ಹೋರಾಟಗಾರ್ತಿ ಡಾ. ಪದ್ಮಿನಿ ಅವರ ಹೆಸರಿನಲ್ಲಿ ನೀಡುವ ಮಕ್ಕಳ ಹಕ್ಕುಗಳ ಪ್ರಶಸ್ತಿಗೆ ಜಿಲ್ಲೆಯ ಪಿ.ಸುಮನ ಮಾಥ್ಯೂ ಭಾಜನರಾಗಿದ್ದಾರೆ.

ಮಕ್ಕಳ ಹಕ್ಕುಗಳ ಪ್ರಚಾರ, ರಕ್ಷಣೆ ಹಾಗು ಶಿಕ್ಷಣದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಸಮಾಜ ಕಾರ್ಯಕರ್ತರಿಗೆ ಕೊಡಮಾಡುವ ರಾಜ್ಯ ಪ್ರಶಸ್ತಿ ಮೊದಲ ಬಾರಿಗೆ ಕೊಡಗಿಗೆ ಲಭಿಸಿದೆ. ಮಕ್ಕಳ ಹಕ್ಕುಗಳ ಕಾರ್ಯಕರ್ತೆ ಹಾಗು ನಾವು ಪ್ರತಿಷ್ಠಾನದ ಕಾರ್ಯಕಾರಿ ನಿರ್ದೆಶಕರಾದ ಕಿರಗಂದೂರು ಗ್ರಾಮದ ಸುಮನ ಪಡೆದುಕೊಂಡಿದ್ದಾರೆ.

ಕೊಡಗು ಜಿಲ್ಲೆ ಸೇರಿದಂತೆ ರಾಜ್ಯಮಟ್ಟದಲ್ಲೂ ಮಕ್ಕಳ ಹಕ್ಕುಗಳ ಕ್ಷೇತ್ರದಲ್ಲಿ ಸುಮನಾ ಮತ್ತು ಅವರ ಪತಿ ಗೌತಮ್ ಕಿರಗಂದೂರು ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರಿನ ಯುನೈಟೆಡ್ ಥಿಯೋಲಾಜಿಕಲ್ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಿಆರ್‌ಟಿಯ ಕಾರ್ಯಕಾರಿ ನಿರ್ದೇಶಕ ಡಾ. ವಾಸುದೇವ ಶರ್ಮಾ, ಚೆನೈನ ಪಾಚಿಯಪ್ಪ ಕಾಲೇಜಿನ ಪ್ರಾಧ್ಯಾಪಕಿ ಎ.ಡಿ. ರೇವತಿ, ಟ್ರಸ್ಟಿಗಳಾದ ಅನ್ಸೆಲ ರೊಸಾರಿಯೋ, ಕಾತ್ಯಾಯಿನಿ ಚಾಮರಾಜ, ರೇವತಿ ಇದ್ದರು.