ಶನಿವಾರಸಂತೆ, ಜು. ೧೮: ರೋಟರಿ ಕ್ಲಬ್ ಶನಿವಾರಸಂತೆಯ ೨೦೨೬-೨೭ ನೇ ಸಾಲಿನ ಪದಗ್ರಹಣ ಸಮಾರಂಭ ತಾ. ೧೯ ರಂದು (ಇಂದು) ಸಂಜೆ ೬ ಗಂಟೆಗೆ ಚಿನ್ನಳ್ಳಿ ರಸ್ತೆಯಲ್ಲಿರುವ ದೇವ್ಸ್ ರೆಸಾರ್ಟ್ನಲ್ಲಿ ನಡೆಯಲಿದೆ.
ರೋಟರಿ ಕ್ಲಬ್ನ ನೂತನ ಅಧ್ಯಕ್ಷರಾಗಿ ಎ.ಸಿ.ಅಶೋಕ್ ಅಧಿಕಾರ ಸ್ವೀಕರಿಸಲಿದ್ದು, ೨೦೨೪-೨೫ ನೇ ಸಾಲಿನ ಜಿಲ್ಲಾ ಗವರ್ನರ್ ವಿಕ್ರಮದತ್ತ ಪ್ರತಿಜ್ಞಾ ವಿಧಿ ಭೋದಿಸಲಿದ್ದಾರೆ. ಅತಿಥಿಗಳಾಗಿ ಸಹಾಯಕ ಗವರ್ನರ್ ಎಚ್.ಎಸ್. ವಸಂತಕುಮಾರ್, ವಲಯ ಸೇನಾನಿ ಪಿ.ಎಸ್. ಮಧುಸೂದನ್ ಉಪಸ್ಥಿತರಿರಲಿದ್ದಾರೆ. ೨೦೨೫ನೇ ಸಾಲಿನ ಅಧ್ಯಕ್ಷ ಯಶವಂತ್, ಕಾರ್ಯದರ್ಶಿ ಎಚ್.ಪಿ.ಚಂದನ್ ಹಾಗೂ ೨೦೨೬-೨೭ ನೇ ಸಾಲಿನ ಕಾರ್ಯದರ್ಶಿ ಎಸ್.ಬಿ.ಸುಪ್ರೀತ್ ಹಾಜರಿರಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.