ನಾಪೋಕ್ಲು, ಜು. ೧೮: ಎದುರುಗಡೆಯಿಂದ ಬಂದ ವಾಹನಕ್ಕೆ ಸೈಡ್ ನೀಡುವ ವೇಳೆ ಖಾಸಗಿ ಬಸ್ನ ಒಂದು ಚಕ್ರ ಚರಂಡಿಯಲ್ಲಿ ಸಿಲುಕಿಕೊಂಡ ಘಟನೆ ಕುಂಜಿಲ ಗ್ರಾಮದಲ್ಲಿ ನಡೆದಿದೆ.
ವೀರಾಜಪೇಟೆಯಿಂದ ಮಡಿಕೇರಿಗೆ ಪ್ರಯಾಣಿಕರನ್ನು ಕರೆದುಕೊಂಡು ತೆರಳುತ್ತಿದ್ದ ಖಾಸಗಿ ಬಸ್ ಕಕ್ಕಬೆ-ನೆಲಜಿ ಸಂಪರ್ಕ ರಸ್ತೆಯಲ್ಲಿ ಸಾಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಕಿರಿದಾದ ರಸ್ತೆಯಲ್ಲಿ ಎದುರುಗಡೆಯಿಂದ ಬರುತ್ತಿದ್ದ ವಾಹನಕ್ಕೆ ಸ್ಥಳಾವಕಾಶ ಕಲ್ಪಿಸುವ ವೇಳೆ ಚರಂಡಿಯ ಭಾಗಕ್ಕೆ ಬಸ್ನ ಚಕ್ರ ಇಳಿದಿದ್ದು, ಮಣ್ಣು ಕುಸಿದು ಚಕ್ರ ಹೂತುಕೊಂಡಿದೆ. ಇದರಿಂದ ಬಸ್ ವಾಲಿದರೂ ಅನಾಹುತ ಸಂಭವಿಸದೆ ಪ್ರಯಾಣಿಕರು ಜೀವಾಪಾಯದಿಂದ ಪಾರಾಗಿದ್ದಾರೆ. ಘಟನೆಯಿಂದ ಶಾಲಾ ವಿದ್ಯಾರ್ಥಿಗಳು ಹಾಗೂ ಇತರ ಪ್ರಯಾಣಿಕರು ಕೆಲಕಾಲ ಆತಂಕಕ್ಕೆ ಒಳಗಾಗಿದ್ದು, ರಸ್ತೆ ಸಂಚಾರಕ್ಕೂ ಅಡಚಣೆ ಉಂಟಾಯಿತು. ಬಳಿಕ ಟ್ರ್ಯಾಕ್ಟರ್ ಸಹಾಯದಿಂದ ಬಸ್ ಅನ್ನು ಸುರಕ್ಷಿತವಾಗಿ ಮೇಲಕ್ಕೆ ಎಳೆದು ತೆರವುಗೊಳಿಸಲಾಯಿತು. ಘಟನೆಯ ಹಿನ್ನೆಲೆಯಲ್ಲಿ ಗ್ರಾಮಸ್ಥರು ಕಿರಿದಾದ ರಸ್ತೆ ಹಾಗೂ ದುರ್ಬಲ ಚರಂಡಿ ವ್ಯವಸ್ಥೆಯನ್ನು ದುರಸ್ತಿಗೊಳಿಸುವಂತೆ ಸಂಬAಧಪಟ್ಟ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.