ಕುಶಾಲನಗರ, ಜು. ೧೯: ಕುಶಾಲನಗರ ಫಾತಿಮಾ ವಿದ್ಯಾಸಂಸ್ಥೆಯ ೫೦ನೇ ವರ್ಷ ಆಚರಣೆಯ ಹಿನ್ನೆಲೆಯಲ್ಲಿ ಶನಿವಾರ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಏರ್ಪಡಿಸಲಾಗಿತ್ತು.

ಕೊಡಗು ವೈದ್ಯಕೀಯ ಕೇಂದ್ರ ಮತ್ತು ಕೊಡಗು ರಕ್ತ ನಿಧಿ ಕೇಂದ್ರ ಸಂಸ್ಥೆಗಳ ಸಹಯೋಗದೊಂದಿಗೆ ನಡೆದ ಶಿಬಿರಕ್ಕೆ ಸಂತ ಸಭಾಸ್ಟಿಯನ್ ದೇವಾಲಯದ ಧರ್ಮಗುರುಗಳಾದ ಜ್ಞಾನ ಪ್ರಕಾಶ್ ಅವರು ಚಾಲನೆ ನೀಡಿ ಶುಭ ಕೋರಿದರು. ಡಾ ಕರುಂಬಯ್ಯ ಅವರ ನೇತೃತ್ವದಲ್ಲಿ ನಡೆದ ಶಿಬಿರದಲ್ಲಿ ರಕ್ತದಾನ ಶಿಬಿರ, ವಿದ್ಯಾರ್ಥಿಗಳ ಪೋಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಉಚಿತ ಆರೋಗ್ಯ ತಪಾಸಣೆ ನಡೆಯಿತು. ಫಾತಿಮಾ ಕಾನ್ವೆಂಟ್ ಸಂಸ್ಥೆಯ ಆಡಳಿತ ಅಧಿಕಾರಿ ಸಿಸ್ಟರ್ ಅರ್ಪಿತ, ವ್ಯವಸ್ಥಾಪಕರಾದ ಸಿಸ್ಟರ್ ಆಗ್ನೆಸ್, ಸಿಸ್ಟರ್ ಫ್ಲೋರೆಟ್, ಸಿಸ್ಟರ್ ಸೋಫಿಯಾ ಮೇರಿ, ಮತ್ತು ಕೊಡಗು ವೈದ್ಯಕೀಯ ಕೇಂದ್ರದ ಡಾ ಚೇತನ್ ಡಾ. ಕಾವ್ಯ, ಹಳೆ ವಿದ್ಯಾರ್ಥಿಗಳ ಸಂಘದ ಡಾ ರಾಮ ಭಟ್, ಕೆ ಎಸ್ ನಾಗೇಶ್, ಹೆಚ್ ಎಂ ರಘು, ಶಿಕ್ಷಕರು, ಶಿಕ್ಷಕಿಯರು ವಿದ್ಯಾರ್ಥಿಗಳು ಮತ್ತು ಪೋಷಕರು ಇದ್ದರು.