ನಾಪೋಕ್ಲು, ಜು. ೧೯: ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆನ್‌ಲೈನ್ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಿದೆ..
ಸ್ವಾತಂತ್ರ‍್ಯ ಚಳುವಳಿ, ಸ್ವಾತಂತ್ರ‍್ಯ ಹೋರಾಟಗಾರರ ಬಗ್ಗೆ ಮಾಹಿತಿ ನೀಡುವುದು, ಗೌರವ, ಪ್ರೀತಿ ಮೂಡಿಸುವುದು, ಸಾಮಾಜಿಕ ಕಳಕಳಿ ಸೌಹಾರ್ದ ಮನೋಭಾವ ಬೆಳೆಸುವುದು, ಸ್ಪರ್ಧೆಯಲ್ಲಿ ಭಾಗವಹಿಸುವ ಮನೋಭಾವ ಮೂಡಿಸುವುದು- ಈ ಉದ್ದೇಶಗಳಿಂದ ಸ್ವಾತಂತ್ರ‍್ಯ ಚಳವಳಿ ಆನ್‌ಲೈನ್ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ವಿದ್ಯಾರ್ಥಿಗಳು ನೋಂದಾಯಿಸಿಕೊಳ್ಳಲು ಜುಲೈ ೩೧ ಕಡೆ ದಿನವಾಗಿರುತ್ತದೆ. ಪ್ರಾಯೋಗಿಕ ಪರೀಕ್ಷೆ ಆಗಸ್ಟ್ ಒಂದರ ಶನಿವಾರ ಸಂಜೆ ೭ ಗಂಟೆಗೆ ನಡೆಯಲಿದ್ದು ಅಂತಿಮ ಪರೀಕ್ಷೆ ಆಗಸ್ಟ್ ಎರಡರಂದು ಭಾನುವಾರ ಬೆಳಿಗ್ಗೆ ೧೦ ಗಂಟೆಗೆ ನಡೆಯಲಿದೆ .೮, ೯ ಮತ್ತು ೧೦ನೇ ತರಗತಿಯ ಸರ್ಕಾರಿ, ಅನುದಾನಿತ, ಖಾಸಗಿ ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ತಮ್ಮ ಸಂಪೂರ್ಣ ವಿವರಗಳೊಂದಿಗೆ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ತಾಲೂಕು ಸಂಯೋಜಕರು ಅಥವಾ ಜಿಲ್ಲಾ ಸಂಯೋಜಕರಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಸ್ಪರ್ಧೆಗೆ ರೂ.೪೦ ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ರಸಪ್ರಶ್ನೆ ಸ್ಪರ್ಧೆಯಲ್ಲಿ ಒಟ್ಟು ೫೦ ಬಹು ಆಯ್ಕೆ ಪ್ರಶ್ನೆಗಳಿರುತ್ತವೆ. ಪ್ರಶ್ನೆಗಳು ಸ್ವಾತಂತ್ರ‍್ಯ ಚಳುವಳಿಗೆ ಸಂಬAಧಿಸಿದಾಗಿರುತ್ತದೆ. ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಪ್ರಶ್ನೆ ಮತ್ತು ಉತ್ತರಗಳಿದ್ದು ವಿದ್ಯಾರ್ಥಿಗಳು ಯಾವುದೇ ಭಾಷೆಯಲ್ಲಿ ಉತ್ತರಿಸಬಹುದು. ಸ್ಪರ್ಧೆ ಆನ್ ಲೈನ್ ನಲ್ಲಿ ನಡೆಯಲಿದ್ದು ನೋಂದಾಯಿಸಿಕೊAಡ ಎಲ್ಲಾ ವಿದ್ಯಾರ್ಥಿಗಳಿಗೆ ಗೂಗಲ್ ಲಿಂಕ್ ಮೂಲಕ ಪ್ರಶ್ನೆಗಳನ್ನು ಕಳಿಸಲಾಗುವುದು.
ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗೆ ೧೦,೦೦೦ ರೂ., ೮೦೦೦ ರೂ. ದ್ವಿತೀಯ ಬಹುಮಾನ ಹಾಗೂ ೬೦೦೦ ರೂ. ತೃತೀಯ ಬಹುಮಾನ ನೀಡಲಾಗುವುದು ೧೦ ಸಮಾಧಾನಕರ ಬಹುಮಾನಗಳಿದ್ದು ವಿಜೇತ ವಿದ್ಯಾರ್ಥಿಗಳಿಗೆ ಸ್ಮರಣಿಕೆ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು ಎಂದು ಸಮಿತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಸ್ಪರ್ಧೆಗೆ ನೋಂದಾಯಿಸಿಕೊಳ್ಳಲು ರಾಜ್ಯ ಸಂಯೋಜಕರ ಸಂಪರ್ಕ ಸಂಖ್ಯೆ ಈ. ಬಸವರಾಜು ೯೪೪೮೯೫೭೬೬೬