ಶನಿವಾರಸಂತೆ, ಜು. ೧೯: ಪಟ್ಟಣದ ಸುಪ್ರಜ ಗುರುಕುಲ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಯುವ ಸಂಸತ್ ಚುನಾವಣೆ ನಡೆದು ವಿದ್ಯಾರ್ಥಿಗಳು ಸಂಭ್ರಮದಿAದ ಮತದಾನದಲ್ಲಿ ಪಾಲ್ಗೊಂಡಿದ್ದರು.
ಶಾಲಾ ಪ್ರಾಂಶುಪಾಲರಾದ ಡಿ.ಸುಜಲಾದೇವಿಯವರ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಶಿಕ್ಷಕರಾದ ಯೋಗೇಶ್, ಅಶ್ವಥ್, ಚೆನ್ನಬಸಪ್ಪ ಮತ್ತು ಚಾಂದಿನಿ ಚುನಾವಣಾಧಿಕಾರಿಗಳಾಗಿ ಪಾಲ್ಗೊಂಡಿದ್ದರು. ಸಾರ್ವಜನಿಕ ಮತದಾನದ ರೀತಿಯಲ್ಲೇ ಬೆರಳಿಗೆ ಶಾಹಿ ಹಾಕುವುದರಿಂದ ಹಿಡಿದು ಬ್ಯಾಲೆಟ್ ಪೇಪರ್ ನೀಡುವವರೆಗೆ ಚುನಾವಣೆ ನಡೆದು ವಿದ್ಯಾರ್ಥಿಗಳಿಗೆ ಚುನಾವಣೆಯ ಪರಿಕಲ್ಪನೆ ಹಾಗೂ ಅದರ ಸಮಗ್ರ ಒಳನೋಟದ ಪರಿಚಯ ಮಾಡಿಕೊಟ್ಟು ಜಾಗೃತಿ ಮೂಡಿಸಲಾಯಿತು. ಚುನಾವಣೆ ನಂತರ ಮತ ಎಣಿಕೆ ನಡೆದು ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.ಯುವ ಸಂಸತ್ ನ ಶಾಲಾ ಪ್ರತಿನಿಧಿಗಳಾಗಿ ಇತನ್ ಗೌಡ, ಪ್ರೇಕ್ಷಾ, ಪೋಷಿತ್ ಗೌಡ, ಸಂಸ್ಕೃತಿ ಬಿ.ಪ್ರತಾಪ್, ಡಿ.ವೈ.ಇಶಾನಿ, ಹೇಮಂತ್, ಬಿ.ಟಿ.ಶಿವಾಲಿ, ಬಿ.ಎಸ್.ಸಾತ್ವಿಕ್, ಶೀಸಾನವಿ ಪ್ರತಿಜ್ಞಾ ವಿಧಿ ಸ್ವೀಕರಿಸಿ , ತಮ್ಮ ತಮ್ಮ ಖಾತೆಗಳಲ್ಲಿನ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುವ ಪ್ರಮಾಣ ವಚನ ಸ್ವೀಕರಿಸಿದರು. ಶಿಕ್ಷಕರು ಹಾಜರಿದ್ದರು.