ಸುಂಟಿಕೊಪ್ಪ, ಜು. ೧೯: ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳೊಂದಿಗೆ ಹೆಲ್ಮೆಟ್ ಧರಿಸಿ ಜೀವ ಉಳಿಸಿ ವಿಷಯದ ಮೇಲೆ ಪ್ರಾತ್ಯಕ್ಷಿತೆ ಸಹಿತ ಸಂವಾದ ನಡೆಯಿತು.
ಈ ಸಂದರ್ಭ ಮಾತನಾಡಿದ ಕುಶಾಲನಗರ ಗ್ರಾಮಾಂತರ ವೃತ್ತನಿರೀಕ್ಷ ದಿನೇಶ್ಕುಮಾರ್, ದ್ವಿಚಕ್ರ ವಾಹನಗಳಲ್ಲಿ ಹೆಲ್ಮಿಟ್ ಧರಿಸಿದರೆ ಎಷ್ಟು ಸುರಕ್ಷತೆ ಮತ್ತು ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಾಲನೆ ಜೀವಕ್ಕೆ ಅಪಾಯಕ ಎಂಬುದನ್ನು ಅವರು ಪ್ರಾತಕ್ಷತೆ ಮೂಲಕ ವಿವರಿಸಿದರು. ಅದೇ ರೀತಿ ಕಾರು ಮತ್ತು ಇತರ ದೊಡ್ಡ ವಾಹನಗಳಲ್ಲಿ ಸೀಟ್ಬೆಲ್ಟ್ ಧರಿಸದೆ ವಾಹನ ಚಲಾಯಿಸುವುದರಿಂದ ಅಪಘಾತಗಳು ಸಂಭವಿಸಿದಾಗ ಆಗುವ ಮಾರಣಾಂತಿಕ ಗಾಯಗಳ ಬಗ್ಗೆ ಪ್ರಾತಕ್ಷತೆ ಮೂಲಕ ವಿವರಿಸಿದ ಅವರು ಮಕ್ಕಳು ಸಂಚಾರಿ ನಿಯಮಗಳನ್ನು ಪಾಲಿಸಬೇಕು ವಾಹನ ಚಾಲನೆಯ ಸಂದರ್ಭ ಚಾಲನಾ ಪರವನಾಗಿ ಸಹಿತ ವಾಹನದ ಎಲ್ಲಾ ಅಗತ್ಯ ದಾಖಲಾತಿಗಳು ಹೊಂದಿದ್ದರೆ ದಂಡ ಮತ್ತು ಇತರ ಕಾನೂನು ಕ್ರಮಗಳಿಂದ ಪಾರಗಬಹುದು ಎಂಬುದರ ವಿವರಿಸಿದರು. ಈ ಸಂದರ್ಭ ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಮೋಹನ್ರಾಜ್, ಸಿಬ್ಬಂದಿಗಳು ಹಾಗೂ ಕಾಲೇಜು ಉಪನ್ಯಾಸಕರು ಇದ್ದರು.