ವೀರಾಜಪೇಟೆ, ಜು. ೨೧: ಮಾಜಿ ಸೈನಿಕರ ಸಹಕಾರ ಸಂಘ ವೀರಾಜಪೇಟೆ ಇವರ ನೇತೃತ್ವದಲ್ಲಿ ಜುಲೈ ೨೬ ರಂದು ಅಗಲಿದ ಯೋಧರಿಗೆ ಶ್ರದ್ದಾಂಜಲಿ ಹಾಗೂ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮವನ್ನು ನಡೆಸಲಾಗುವುದು ಎಂದು ಮಾಜಿ ಸೈನಿಕರ ಸಹಕಾರ ಸಂಘದ ಅಧ್ಯಕ್ಷ ಚಪ್ಪಂಡ ಹರೀಶ್ ಉತ್ತಯ್ಯ ಹೇಳಿದರು.

ವೀರಾಜಪೇಟೆ ಪ್ರೆಸ್‌ಕ್ಲಬ್‌ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಭಾನುವಾರ ಬೆ. ೧೦.೩೦ಕ್ಕೆ ಪಟ್ಟಣದ ಸ್ಟೇಟ್‌ಬ್ಯಾಂಕ್ ಎದುರು ಇರುವ ಯೋಧರ ಸ್ಮಾರಕ ಸ್ತಂಭದಲ್ಲಿ ಅಗಲಿದ ಯೋಧರಿಗೆ ಶ್ರದ್ದಾಂಜಿಲಿ ಅರ್ಪಿಸಲಾಗುವುದು. ಮಾಜಿ ಸೈನಿಕರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಅಗಲಿದ ಯೋಧರ ಆತ್ಮಕ್ಕೆ ಶಾಂತಿ ಕೋರಬೇಕಾಗಿ ಕೇಳಿಕೊಂಡರು.

ಕಾರ್ಯದರ್ಶಿ ಪುಗ್ಗೆರ ನಂದಾ ಮಾತನಾಡಿ, ಶ್ರದ್ಧಾಂಜಲಿ ಹಾಗೂ ವಿಜಯೋತ್ಸವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ವೀರಾಜಪೇಟೆ ತಹಶೀಲ್ದಾರ್ ಪ್ರವೀಣ್ ಕುಮಾರ್, ಡಿವೈಎಸ್‌ಪಿ ಮಹೇಶ್ ಕುಮಾರ್, ಪುರಸಭೆ ಮುಖ್ಯಾಧಿಕಾರಿ ಪಟ್ಟಚೆರವಂಡ ನಾಚಪ್ಪ ಉಪಸ್ಥಿತರಿರಲಿದ್ದಾರೆ. ಅಲ್ಲದೆ ಮುಂದಿನ ಆಗಸ್ಟ್ನಲ್ಲಿ ಮಾಜಿ ಸೈನಿಕರು ಹಾಗೂ ಅವರುಗಳ ಅವಲಂಬಿತರಿಗೆ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗುವುದು ಎಂದು ಹೇಳಿದರು.

ಗೋಷ್ಠಿಯಲ್ಲಿ ಉಪಾಧ್ಯಕ್ಷ ರಾಜ ಚಂದ್ರಶೇಖರ್ ಮಾಜಿ ಅಧ್ಯಕ್ಷರಾದ ಚೇಂದ್ರಿಮಾಡ ನಂಜಪ್ಪ, ಖಜಾಂಚಿ ತೋರೆರ ರಾಜಾ ಪೂವಯ್ಯ ನಿರ್ದೇಶಕರುಗಳಾದ ಪಟ್ರಪಂಡ ಕರುಂಬಯ್ಯ, ಹೆಚ್. ಅಪ್ಪಯ್ಯ, ಅಣ್ಣಳಮಾಡ ಸುಬ್ಬಯ್ಯ, ಬಾಳೆಕುಟ್ಟಿರ ದಿನಿ ಬೋಪಯ್ಯ ಉಪಸ್ಥಿತರಿದ್ದರು.