ವೀರಾಜಪೇಟೆ, ಜು. ೨೧: ನೀಟ್ ಪ್ರಶ್ನೆ ಪತ್ರಿಕೆ ಹಗರಣ ವಿರುದ್ಧ ನವದೆಹಲಿಯಲ್ಲಿ ಸಿಜೆಪಿಯಿಂದ ನಡೆಯುತ್ತಿರುವ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಲು ಮತ್ತು ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಬೆಂಬಲಿಗರು ವೀರಾಜಪೇಟೆ ಗಡಿಯಾರ ಕಂಬದ ಬಳಿ ಜಮಾಯಿಸಿದರು.

ಸಾವಿರಾರು ಯುವ ಪ್ರತಿಭಟನಾಕಾರರನ್ನು ಬೆಂಬಲಿಸಿ ವೀರಾಜಪೇಟೆಯ ಕೆಲವು ನಿವಾಸಿಗಳು ಶಾಂತಿಯುತ ಪ್ರತಿಭಟನೆ ಮತ್ತು ಜಾಗೃತಿ ಅಭಿಯಾನವನ್ನು ನಡೆಸಿದರು. ದೇಶಾದ್ಯಂತ ಪ್ರತಿಭಟನೆಗಳನ್ನು ತೀವ್ರಗೊಳಿಸಿದ ಘಟನೆಯಾದ ಆಸ್ಪತ್ರೆಗೆ ದಾಖಲಾಗುವ ಮೊದಲು ಸಿಜೆಪಿಯನ್ನು ಬೆಂಬಲಿಸಿ ಜಂತರ್ ಮಂತರ್‌ನಲ್ಲಿ ೨೦ ದಿನಗಳ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಇಂಜಿನಿಯರ್ ಮತ್ತು ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಅವರಿಗೆ ಸಭೆ ಬೆಂಬಲ ವ್ಯಕ್ತಪಡಿಸಿತು. ಆಯೋಜಕ ಮತ್ತು ವೀರಾಜಪೇಟೆ ನಿವಾಸಿ ಸಫ್ವಾನ್ ಅಬ್ದುಲ್ ಸಲೀಮ್, ಈ ಪ್ರತಿಭಟನೆಯು ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆಯ ಪರಿಣಾಮವನ್ನು ಎತ್ತಿ ತೋರಿಸುವುದು ಮತ್ತು ಅದಕ್ಕೆ ಹೊಣೆಗಾರಿಕೆಯನ್ನು ಒತ್ತಾಯಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದರು. ವೀರಾಜಪೇಟೆಯಲ್ಲಿ ನಡೆದ ಈ ಜಾಗೃತಿ ಆಂದೋಲನವು ಯಾವುದೇ ರಾಜಕೀಯ ಪಕ್ಷ ಅಥವಾ ಧರ್ಮಕ್ಕೆ ಸಂಬAಧಿಸಿಲ್ಲ ಎಂದು ಸಲೀಂ ಹೇಳಿದರು.