ಸುಂಟಿಕೊಪ್ಪ, ಜು. ೨೩: ಸುಂಟಿಕೊಪ್ಪ ಪಟ್ಟಣದ ಹೃದಯಭಾಗದ ಸಮೀಪದ ತೋಟವೊಂದರಲ್ಲಿ ಕಾಡಾನೆ ಗಳು ಕಾಣಿಸಿಕೊಂಡು ಸಾರ್ವಜನಿಕರಲ್ಲಿ ಭೀತಿಯನ್ನು ಸೃಷ್ಟಿಸಿವೆ.

ಸುಂಟಿಕೊಪ್ಪ ಸರ್ಕಾರಿ ಶಾಲೆಯ ಹಿಂಭಾಗದಲ್ಲಿರುವ ಲಕ್ಷಿö್ಮ ತೋಟದಲ್ಲಿ ಕಾಡಾನೆಗಳ ಹಿಂಡು ಫಲವತ್ತಾಗಿ ಬೆಳೆದುನಿಂತಿದ್ದ ನೂರಕ್ಕೂ ಅಧಿಕ ಕಾಫಿ ಗಿಡಗಳನ್ನು ಸಂಪೂರ್ಣ ಧ್ವಂಸಗೊಳಿಸಿವೆ.

ಸ್ಥಳೀಯರ ಮಾಹಿತಿ ಪ್ರಕಾರ ಈ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಆನೆಗಳ ಓಡಾಟ ನಿರಂತರವಾಗಿದ್ದು, ರೈತರು ಆತಂಕದಲ್ಲಿ ಜೀವನ ಸಾಗಿಸುತ್ತಿದ್ದಾರೆ. ತೋಟದಲ್ಲಿ ಫಸಲುಭರಿತ ಕಾಫಿ, ಬಾಳೆ ಹಾಗೂ ಹಣ್ಣು ಸೇರಿ ಸಾವಿರಾರು ರೂ ನಷ್ಟ ಉಂಟಾಗಿದೆ ತೋಟದ ಮಾಲೀಕರು ತಿಳಿಸಿದ್ದಾರೆ.