ಗೋಣಿಕೊಪ್ಪಲು, ಜು. ೨೩: ಪೊನ್ನಂಪೇಟೆ ಸಾಯಿ ಶಂಕರ ವಿದ್ಯಾಸಂಸ್ಥೆ ಮತ್ತು ಪ್ರಶಾಂತಿ ನಿಲಯದಲ್ಲಿ ಸುಮಾರು ೨೩ ವರ್ಷಗಳ ಕಾಲ ವೈದ್ಯಕೀಯ ಸೇವೆ ಸಲ್ಲಿಸಿದ ಗೋಣಿಕೊಪ್ಪಲಿನ ಡಾ. ಚಂದ್ರಶೇಖರ್ ಅವರನ್ನು ಬೀಳ್ಕೊಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿದ್ಯಾಸಂಸ್ಥೆ ಅಧ್ಯಕ್ಷರಾದ ಝರು ಗಣಪತಿ ಅವರು ಮಾತನಾಡಿ, ವೈದ್ಯರಾದ ಚಂದ್ರಶೇಖರ್ ಅವರಿಗೂ ಪೊನ್ನಂಪೇಟೆ ಪ್ರಶಾಂತಿ ನಿಲಯಕ್ಕೂ ಅವಿನಾಭಾವ ಸಂಬAಧವಿದೆ. ಅವರ ವೈದ್ಯಕೀಯ ಸೇವೆ ಹಾಗೂ ಮಾರ್ಗದರ್ಶನ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೂ ಪ್ರೇರೇಪಣೆ ನೀಡಿದೆ ಎಂದರು. ಇದೇ ಸಂದರ್ಭ ಗೋಣಿಕೊಪ್ಪಲಿನ ಡಾ. ಕಾಳಿಮಾಡ ಶಿವಪ್ಪ ಅವರನ್ನೂ ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಚಂದ್ರಶೇಖರ್ ಅವರು, ಶಿಸ್ತು ಹಾಗೂ ಪರಿಶ್ರಮದೊಂದಿಗೆ ವಿದ್ಯಾರ್ಥಿಗಳು ಜೀವನದ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ನಂತರ ಶಿಕ್ಷಣದ ಮಹತ್ವ ಕುರಿತು ಉಪನ್ಯಾಸ ನೀಡಿದರು. ಇದೇ ಸಂದರ್ಭ ಡಾ. ಕೆ.ಕೆ ಶಿವಪ್ಪ ಅವರು ತಮ್ಮ ಗಾಯನದ ಮೂಲಕ ‘ನಯ ವಿನಯ’ದ ಬೋಧನೆ ಮಾಡಿದರು.

ಪ್ರಮುಖರಾದ ಅರಮಣಮಾಡ ಸತೀಶ್ ವೈದ್ಯರ ನಿಸ್ವಾರ್ಥ ಸೇವೆ, ಸಾಧನೆ ಹಾಗೂ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಯಶೋಧ ಚಂದ್ರಶೇಖರ್, ನಿರೀಕ್ಷಿತ್, ವಿದ್ಯಾಸಂಸ್ಥೆಯ ಟೃಸ್ಟಿ ಗಾನ ಕಾರ್ಯಪ್ಪ, ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರು, ಆಡಳಿತ ಮಂಡಳಿ ಸದಸ್ಯರು, ಶಿಕ್ಷಕರು ಭಾಗವಹಿಸಿದ್ದರು.