ಮಡಿಕೇರಿ, ಜು. ೨೩: ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯ, ಸಾಹಿತ್ಯ ಅಕಾಡೆಮಿ, ತೆಲಂಗಾಣ ಸರ್ಕಾರದ ಸಹಯೋಗದಲ್ಲಿ ಜುಲೈ ೧೮ ರಂದು ತೆಲಂಗಾಣದ ರವೀಂದ್ರ ಭಾರತಿ ಕಾನ್ಫರೆನ್ಸ್ ಹಾಲ್ ಹೈದರಾಬಾದ್‌ನಲ್ಲಿ ನಡೆದ ದಕ್ಷಿಣ ಭಾರತೀಯ ಯುವ ಸಾಹಿತ್ಯ ಉತ್ಸವದಲ್ಲಿ ಕೊಡವ ಭಾಷಾ ಕವಿಯಾಗಿ ಕುತ್ತ್ನಾಡ್ ಬಿ. ಶೆಟ್ಟಿಗೇರಿ ಮೂಲದ ಕಡೇಮಡ ಸುವಿತ್ ಸೋಮಣ್ಣ ಭಾಗವಹಿಸಿ ಕವನ ವಾಚನ ಮಾಡಿದರು.

ದಕ್ಷಿಣ ಭಾರತದ ವಿವಿಧ ಭಾಗದಿಂದ ಆಗಮಿಸಿದ್ದ ಹಲವು ಭಾಷಾ ಕವಿಗಳೊಂದಿಗೆ ಗೋಷ್ಠಿಯಲ್ಲಿ ಹಿರಿಯ ಸಾಹಿತಿ, ಲೇಖಕಿ ತೀತಿರ ರೇಖಾ ವಸಂತ್ ಅವರ ಮಾರ್ಗದರ್ಶನದಲ್ಲಿ ಪಾಲ್ಗೊಂಡ ಕಡೇಮಡ ಸುವಿತ್ ಸೋಮಣ್ಣ ಅವರು ಕೊಡವ ಸಂಸ್ಕೃತಿ ಬಾಳು ಬದುಕನ್ನು ಬಿಂಬಿಸುವ "ಬಾಳೋ" ಎಂಬ ಶೀರ್ಷಿಕೆಯ ಕವನವನ್ನು ಕೊಡವತಕ್ಕ್ನಲ್ಲಿ ವಾಚಿಸಿ, ಇಂಗ್ಲೀಷಿನಲ್ಲಿಯೂ ಕವನದ ಭಾವಾರ್ಥವನ್ನು ತಿಳಿಸಿ ಕೊಡವ ಮೂಲ ಉಡುಪಾದ ಬೊಳ್ತಕುಪ್ಯ ಚಾಲೆಯಲ್ಲಿ ಸುವಿತ್ ಸೋಮಣ್ಣ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಗಮನ ಸೆಳೆದರು.