ಗೋಣಿಕೊಪ್ಪಲು, ಜು. ೨೭: ಶರವೇಗದಲ್ಲಿ ಬೆಳೆಯುತ್ತಿರುವ ಗೋಣಿಕೊಪ್ಪ ನಗರದಲ್ಲಿ ದಿನೆ ದಿನೇ ಟ್ರಾಫಿಕ್ ಸಮಸ್ಯೆಗಳು ಎದುರಾಗುತ್ತಿದ್ದವು. ಅಡ್ಡಾದಿಡ್ಡಿ ವಾಹನ ನಿಲುಗಡೆ, ಟ್ರಾಫಿಕ್ ಸಮಸ್ಯೆ ಉಂಟು ಮಾಡುತ್ತಿರುವ ಆಟೋ ರಿಕ್ಷಾಗಳು, ರಸ್ತೆ ಬದಿಯ ಹಣ್ಣಿನ ಹಾಗೂ ತರಕಾರಿ ವ್ಯಾಪಾರಸ್ಥರಿಂದ ಟ್ರಾಫಿಕ್ ಸಮಸ್ಯೆ ಉಲ್ಬಣಗೊಳ್ಳುತ್ತಿದ್ದವು. ಇವುಗಳನ್ನು ನಿಯಂತ್ರಣಕ್ಕೆ ತರುವಲ್ಲಿ ಗೋಣಿಕೊಪ್ಪ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಶ್ಲಾಘನೆ ವ್ಯಕ್ತವಾಯಿತು.

ಕೊಡಗು ಜಿಲ್ಲಾ ವಾಣಿಜ್ಯ ಹಾಗೂ ಕೈಗಾರಿಕಾ ಸಂಸ್ಥೆ, ಸ್ಥಾನೀಯ ಸಮಿತಿ ಗೋಣಿಕೊಪ್ಪ ಇವರ ವತಿಯಿಂದ ಹರಿಶ್ಚಂದ್ರಪುರದ ಚೇಂಬರ್ ಆಫ್ ಕಾಮರ್ಸ್ನ ಸಭಾಂಗಣದಲ್ಲಿ ಗೋಣಿಕೊಪ್ಪ ಚೇಂಬರ್ ಆಫ್ ಕಾಮರ್ಸ್ನ ಸ್ಥಾನೀಯ ಸಮಿತಿಯ ಅಧ್ಯಕ್ಷ ಕಡೇಮಾಡ ಸುನೀಲ್ ಮಾದಪ್ಪ ಅಧ್ಯಕ್ಷತೆಯಲ್ಲಿ ಜರುಗಿದ ಮಾಸಿಕ ಸಭೆಯಲ್ಲಿ ಸರ್ವ ಸದಸ್ಯರು ಗೋಣಿಕೊಪ್ಪ ನಗರದ ಟ್ರಾಫಿಕ್ ನಿಯಂತ್ರಣದ ಬಗ್ಗೆ ಶ್ಲಾಘನೆ ವ್ಯಕ್ತ ಪಡಿಸಿದರು.

ಗೋಣಿಕೊಪ್ಪ ವರ್ತಕರ ಸಂಘದ ಪದಾಧಿಕಾರಿಗಳ ಸಭೆಗೆ ಈ ಹಿಂದೆ ಗೋಣಿಕೊಪ್ಪ ಪೊಲೀಸ್ ಠಾಣೆಯ ನೂತನ ಠಾಣಾಧಿಕಾರಿ ಕಾಳೇಗೌಡ ಹಾಗೂ ಕ್ರೆöÊಂ ಎಸ್‌ಐ ವೆಂಕಟೇಶ್ ಇವರುಗಳನ್ನು ಆಹ್ವಾನಿಸಿ ನಗರದಲ್ಲಿ ಆಗಿಂದ್ದಾಗಿಯೇ ಟ್ರಾಫಿಕ್ ಸಮಸ್ಯೆ ಬಗ್ಗೆ ಬೆಳಕು ಚೆಲ್ಲಿದ್ದರು.

ಇತ್ತೀಚೆಗೆ ಬಹು ನಿರೀಕ್ಷಿತ ಗೋಣಿಕೊಪ್ಪ ಬಸ್ ನಿಲ್ದಾಣವನ್ನು ಲೋಕಾರ್ಪಣೆಗೊಳಿಸಿದ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ದಶಕಗಳ ಸಮಸ್ಯೆಗೆ ಪರಿಹಾರ ಕಲ್ಪಿಸಿದ್ದಾರೆ. ಇದರಿಂದ ಬಸ್ ನಿಲುಗಡೆಗೆ ವ್ಯವಸ್ಥಿತ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಮುಖ್ಯ ರಸ್ತೆಯಲ್ಲಿ ಸರಾಗವಾಗಿ ವಾಹನ ಸಂಚಾರ ನಡೆಯುತ್ತಿದೆ. ಇದರಿಂದಾಗಿ ಶಾಸಕ ಪೊನ್ನಣ್ಣನವರು ವಿಶೇಷ ಆಸಕ್ತಿ ವಹಿಸಿರುವುದನ್ನು ಸಭೆಯು ಶ್ಲಾಘಿಸಿತು.

ಸಭೆಯಲ್ಲಿ ಚೇಂಬರ್‌ನ ಉಪಾಧ್ಯಕ್ಷ ಪೊನ್ನಿಮಾಡ ಸುರೇಶ್, ಕಿರಿಯಮಾಡ ಅರುಣ್ ಪೂಣಚ್ಚ, ನಗರದ ಟ್ರಾಫಿಕ್ ವ್ಯವಸ್ಥೆಗಳ ಮತ್ತಷ್ಟು ಪ್ರಗತಿಯ ಬಗ್ಗೆ ಹಲವು ಸಲಹೆಗಳನ್ನು ನೀಡಿದರು. ವೇದಿಕೆಯಲ್ಲಿ ಉಪಾಧ್ಯಕ್ಷ ಪ್ರಭಾಕರ್ ನೆಲ್ಲಿತ್ತಾಯ, ಉಪಸ್ಥಿತರಿದ್ದರು. ಸಭೆಯಲ್ಲಿ ಮಾಜಿ ಚೇಂಬರ್ ಜಿಲ್ಲಾಧ್ಯಕ್ಷ ಬಿ.ಎನ್.ಪ್ರಕಾಶ್, ಗೋಣಿಕೊಪ್ಪ ಸ್ಥಾನೀಯ ಚೇಂಬರ್‌ನ ನಿರ್ದೇಶಕಿ ಚೇಂದAಡ ಸುಮಿ ಸುಬ್ಬಯ್ಯ, ಎಫ್‌ಕೆಸಿಸಿ ನಿರ್ದೇಶಕ ಕಾಡ್ಯಮಾಡ ಗಿರೀಶ್ ಗಣಪತಿ, ಪದಾಧಿಕಾರಿಗಳಾದ ಗಣೇಶ್‌ರೈ, ರಾಜಶೇಖರ್, ಲಕ್ಷಿö್ಮರೆಡ್ಡಿ, ಮೆಹರೂಫ್, ಮಲ್ಚಿರ ಗಾಂಧಿ ದೇವಯ್ಯ, ಮಾಚಿಮಾಡ ಅನಿತಾ, ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.