ಪೊನ್ನAಪೇಟೆ, ಜು. ೨೭: ಪೊನ್ನಂಪೇಟೆ ತಾಲೂಕಿನ ಬೇಗೂರು ಗ್ರಾಮದ ಪಟ್ಟಕೇರಿ ಅಂಬಲ ಒಕ್ಕೂಟದ ವತಿಯಿಂದ ಬೇಗೂರಿನ ಬೆಂಜAಡ ಪ್ರೇಮಾ ರಾಮು ಅವರ ಗದ್ದೆಯಲ್ಲಿ ಆಯೋಜಿಸಲಾಗಿದ್ದ ೧೦ನೇ ವರ್ಷದ ಬೇಗೂರು ಗ್ರಾಮಮಟ್ಟದ ಕೆಸರುಗದ್ದೆ ಕ್ರೀಡಾಕೂಟದಲ್ಲಿ ಬೇಗೂರು ಗಾಮಸ್ಥರು ಹಾಗೂ ಚಿಣ್ಣರು ಕೆಸರು ಗದ್ದೆಯಲ್ಲಿ ಮಿಂದೆದ್ದು ಸಂಭ್ರಮಿಸಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಹುದಿಕೇರಿ ಪ್ಯಾಕ್ಸ್ ಅಧ್ಯಕ್ಷ ಅಜ್ಜಿಕುಟ್ಟಿರ ಮುತ್ತಪ್ಪ ಹೂ ಕುಂಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಬೇಗೂರು ಗ್ರಾಮಸ್ಥರು ಪ್ರತಿ ವರ್ಷ ತಮ್ಮ ಗ್ರಾಮಮಟ್ಟದಲ್ಲಿ ಕೆಸರು ಗದ್ದೆ ಕ್ರೀಡಾಕೂಟ ಆಯೋಜಿಸುವ ಮೂಲಕ ಭತ್ತದ ಕೃಷಿಯತ್ತ ಯುವಕರು ಒಲವು ತೋರುವಂತೆ ಮಾಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.
ಮತ್ತೋರ್ವ ಅತಿಥಿ ಬೇಗೂರು ಪೂಳೆಮಾಡು ಈಶ್ವರ ದೇವಸ್ಥಾನದ ದೇವತಕ್ಕರು ಹಾಗೂ ಮಾಜಿ ಸೈನಿಕ ಮತ್ರಂಡ ಪೂಣಚ್ಚ ಮಾತನಾಡಿ, ಭತ್ತದ ಕೃಷಿ ನಮ್ಮ ಸಂಸ್ಕೃತಿಯ ಭಾಗವಾಗಿದ್ದು, ಇದರಿಂದ ಭೂಮಿಯಲ್ಲಿ ಅಂತರ್ಜಲದ ಮಟ್ಟ ಹೆಚ್ಚಾಗುತ್ತದೆ. ಅಂತರ್ಜಲ ಹೆಚ್ಚಾದರೆ, ಕೆರೆ ಕಟ್ಟೆಗಳು ತುಂಬುತ್ತವೆ. ಆದ್ದರಿಂದ ಗದ್ದೆಯನ್ನು ಹೊಂದಿರುವ ಪ್ರತಿಯೊಬ್ಬರೂ ಗದ್ದೆಯನ್ನು ಪಾಳುಬಿಡದೇ ಪ್ರತಿವರ್ಷ ಭತ್ತ ನಾಟಿ ಮಾಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪಟ್ಟಕೇರಿ ಅಂಬಲ ಒಕ್ಕೂಟದ ಅಧ್ಯಕ್ಷ ಅರಮಣಮಾಡ ಕೆ. ವಿಜಯ, ಒಕ್ಕೂಟ ಪ್ರಾರಂಭವಾದಾಗಿನಿAದಲೂ ಗ್ರಾಮದಲ್ಲಿ ಕೃಷಿ ಬಗ್ಗೆ ನಿರಂತರ ಜಾಗೃತಿ ಮೂಡಿಸಲಾಗುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭತ್ತ ಬೆಳೆಯಲು ಪ್ರೇರೇಪಿಸಲಾಗುತ್ತಿದೆ ಎಂದರು.
ಇದೇ ಸಂದರ್ಭ ಬೇಗೂರು ಗ್ರಾಮದ ಪ್ರಗತಿಪರ ಕೃಷಿಕ ಮತ್ರಂಡ ಮಣಿ ನಂಜಪ್ಪ ಅವರನ್ನು ಒಕ್ಕೂಟದ ವತಿಯಿಂದ ಸನ್ಮಾನಿಸಲಾಯಿತು.
ಸ್ಪರ್ಧೆಯ ವಿಜೇತರು
ಹಗ್ಗಜಗ್ಗಾಟ ಸ್ಪರ್ಧೆ ಪುರುಷರ ವಿಭಾಗದಲ್ಲಿ ಮಹಾವಿಷ್ಣು ತಂಡ ಪ್ರಥಮ, ಕುಂದೂರು ಭಗವತಿ ದ್ವಿತೀಯ ಸ್ಥಾನ, ಮಹಿಳೆಯರ ವಿಭಾಗದಲ್ಲಿ ಮಹಾವಿಷ್ಣು ತಂಡ ಪ್ರಥಮ, ಓಣಿಯಲ್ ಅಯ್ಯಪ್ಪ ತಂಡ ದ್ವಿತೀಯ ಸ್ಥಾನ, ೧೮ ವರ್ಷದೊಳಗಿನ ಮಕ್ಕಳ ವಿಭಾಗದಲ್ಲಿ ಪೂಳೆಮಾಡು ಈಶ್ವರ ತಂಡ ಪ್ರಥಮ, ಕೂರ್ಗ್ ಫಾಲ್ಕನ್ ದ್ವಿತೀಯ, ೧೪ ವರ್ಷ ಒಳಗಿನ ಮಕ್ಕಳ ವಿಭಾಗದಲ್ಲಿ ಗಾನವಿ ತಂಡ ಪ್ರಥಮ, ಕಾವೇರಪ್ಪ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು.
ವಾಲಿಬಾಲ್‌ನಲ್ಲಿ ಮಹಾವಿಷ್ಣು ತಂಡ ಪ್ರಥಮ, ಪಟ್ಟಗೇರಿ ಒಕ್ಕೂಟ ದ್ವಿತೀಯ ಸ್ಥಾನ ಪಡೆದುಕೊಂಡಿತು.
ಕೆಸರುಗದ್ದೆ ಓಟದ ಸ್ಪರ್ಧೆ ಪುರುಷರ ವಿಭಾಗದಲ್ಲಿ ದೀಪಕ್ ಪ್ರಥಮ, ಚಂಗಪ್ಪ ದ್ವಿತೀಯ, ಮಹಿಳೆಯರ ವಿಭಾಗದಲ್ಲಿ ನವ್ಯ ಪ್ರಥಮ, ಪೂಜಾ ದ್ವಿತೀಯ ಸ್ಥಾನ ಪಡೆದುಕೊಂಡರು.
ವಿಷದ ಚೆಂಡು ಸ್ಪರ್ಧೆ ಪುರುಷರ ವಿಭಾಗದಲ್ಲಿ ಶರಣು ತಮ್ಮಯ್ಯ ಪ್ರಥಮ, ಉತ್ತಪ್ಪ ದ್ವಿತೀಯ, ಮಹಿಳೆಯರ ವಿಭಾಗದಲ್ಲಿ ನಿತ್ಯಾ ಪ್ರಥಮ, ನವ್ಯ ದ್ವಿತೀಯ ಸ್ಥಾನ ಪಡೆದುಕೊಂಡರು.
ಮಕ್ಕಳ ಓಟ ೧೦ ರಿಂದ ೧೪ ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಶಿವಂ ಪ್ರಥಮ, ಲೂಥನ್ ಸೋಮಯ್ಯ ದ್ವಿತೀಯ, ಬಾಲಕಿಯರ ವಿಭಾಗದಲ್ಲಿ ಗಾನವಿ ಪ್ರಥಮ, ಶಾನ್ವಿ ದ್ವಿತೀಯ ಸ್ಥಾನ, ೧೫ ರಿಂದ ೧೮ ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಕೃತಿಕ್ ಪ್ರಥಮ, ಮನೋಜ್ ದ್ವಿತೀಯ, ಬಾಲಕಿಯರ ವಿಭಾಗದಲ್ಲಿ ನವ್ಯ ಪ್ರಥಮ, ಗಾನವಿ ದ್ವಿತೀಯ ಸ್ಥಾನ ಪಡೆದುಕೊಂಡರು.
ಬೇಗೂರು ಪಟ್ಟಕೇರಿ ಅಂಬಲ ಒಕ್ಕೂಟದ ಸದಸ್ಯರಿಗಾಗಿ ನಡೆದ ವಿಷದ ಚೆಂಡು ಸ್ಪರ್ಧೆಯಲ್ಲಿ ಅಂಬಿಕ ಪ್ರಥಮ, ಸುಶೀಲ ದ್ವಿತೀಯ, ಮಕ್ಕಳ ವಿಭಾಗದಲ್ಲಿ ಬಿಪಾಶ ಪ್ರಥಮ, ಪುಣ್ಯ ದ್ವಿತೀಯ, ಒಕ್ಕೂಟದ ಬಾಲಕರ ಓಟದಲ್ಲಿ ಲೂಥನ್ ಪ್ರಥಮ, ಬೋಪಣ್ಣ ದ್ವಿತೀಯ, ಒಕ್ಕೂಟದ ಬಾಲಕಿಯರ ಓಟದಲ್ಲಿ ಗಾನವಿ ಪ್ರಥಮ, ಯಶಿಕ ದ್ವಿತೀಯ ಸ್ಥಾನ ಪಡೆದುಕೊಂಡರು.
ಈ ಸಂದರ್ಭ ಒಕ್ಕೂಟದ ಉಪಾಧ್ಯಕ್ಷ ಕೇಚೆಟ್ಟಿರ ಶರಣು ತಮ್ಮಯ್ಯ, ಕಾರ್ಯದರ್ಶಿ ಮತ್ರಂಡ ವೀಟು ಉತ್ತಪ್ಪ, ಮಾಜಿ ಅಧ್ಯಕ್ಷ ಮತ್ರಂಡ ರಾಜ ಮುತ್ತಪ್ಪ, ಮಾಜಿ ಕಾರ್ಯದರ್ಶಿ ಚೋಡುಮಾಡ ಅಪ್ಪು ಸುಬ್ಬಯ್ಯ, ಮತ್ರಂಡ ಮನೋಜ್ ಬಿದ್ದಪ್ಪ, ಮತ್ರಂಡ ಅರ್ಜುನ, ಮತ್ರಂಡ ವೀಸು ತಮ್ಮಯ್ಯ, ಅರಮಣಮಾಡ ನಾಚಪ್ಪ, ಒಕ್ಕೂಟದ ಸದಸ್ಯರು ಹಾಗೂ ಬೇಗೂರು ಗ್ರಾಮಸ್ಥರು ಇದ್ದರು. ಮತ್ರಂಡ ಗಾನವಿ ದೇಚಮ್ಮ ಪ್ರಾರ್ಥಿಸಿ, ಮತ್ರಂಡ ಬೋಪಣ್ಣ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. - ಚನ್ನನಾಯಕ