ನಾಪೋಕ್ಲು, ಜು. ೨೮: ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ನಾಪೋಕ್ಲು ಹೋಬಳಿ ಘಟಕದ ಪದಾಧಿಕಾರಿಗಳ ಆಯ್ಕೆ ಜಿಲ್ಲಾ ಅಧ್ಯಕ್ಷ ದೀಪಕ್ ನೇತೃತ್ವದಲ್ಲಿ ನಡೆಯಿತು,
ಇಲ್ಲಿಯ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಡಿಕೇರಿ ತಾಲೂಕು ರಕ್ಷಣಾ ವೇದಿಕೆ ಅಧ್ಯಕ್ಷ ವಿನೋದ್ ವಹಿಸಿದ್ದರು.
ನಾಪೋಕ್ಲು ಹೋಬಳಿ ಘಟಕದ ನೂತನ ಅಧ್ಯಕ್ಷರಾಗಿ ಹನೀಫ್, ಉಪಾಧ್ಯಕ್ಷರಾಗಿ ಮಿಥುನ್, ಪ್ರಧಾನ ಕಾರ್ಯದರ್ಶಿಯಾಗಿ ರಜಾಕ್, ವೀರಾಜಪೇಟೆ ವಿಧಾನಸಭಾ ಕ್ಷೇತ್ರ ಅಧ್ಯಕ್ಷರಾಗಿ ಎಂ.ಎ ರಫೀಕ್ ಅವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭ ಅತಿಥಿಯಾಗಿ ಭಾಗವಹಿಸಿದ್ದ ನಾಪೋಕ್ಲು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಂದ್ರಮೌಳಿ ಅವರು ಮಾತನಾಡಿ, ಜನಸಾಮಾನ್ಯರ ಮತ್ತು ಸರ್ಕಾರದ ಕೊಂಡಿಯಾಗಿ ಸಂಘಟನೆಗಳು ಕಾರ್ಯನಿರ್ವಹಿಸಬೇಕು. ನಾಡು-ನುಡಿಯ ಪರವಾಗಿ ಮತ್ತು ಜನಸಾಮಾನ್ಯರ ಪರವಾಗಿ ಕೆಲಸ ಮಾಡಲು ಅಧಿಕಾರಿ ವರ್ಗವೂ ಸದಾ ಸಿದ್ದವಿದೆ. ಸೌಹಾರ್ದ, ಶಾಂತಿಯಿAದ ಎಲ್ಲವೂ ಸಾಧ್ಯ ಎಂದು ಕಿವಿಮಾತು ಹೇಳಿದರು.
ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ದೀಪಕ್ ಅವರು ಮಾತನಾಡಿ, ಸಂಘಟನೆಯು ಮೂರು ದಶಕಗಳಿಂದ ನೊಂದವರ ಪರವಾಗಿ, ಶೋಷಿತರ ಧ್ವನಿಯಾಗಿ ರಾಜ್ಯಾದ್ಯಂತ ಕಾರ್ಯನಿರ್ವಹಿಸುತ್ತಿದೆ. ಸರ್ಕಾರದ ಸೌಲಭ್ಯಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವ ಮತ್ತು ನಾಡು-ನುಡಿಗೆ ಅನ್ಯಾಯವಾದಾಗ ಧ್ವನಿಯಾಗಬೇಕು. ಜವಾಬ್ದಾರಿ ಅರಿತು ಎಲ್ಲರೂ ಕೆಲಸಮಾಡುವಂತೆಯೂ ಕಿವಿಮಾತು ಹೇಳಿದರು.
ಯುವ ಘಟಕದ ಅಧ್ಯಕ್ಷರಾದ ವಸಂತ ಆಚಾರ್ಯ ಅವರು ಮಾತನಾಡಿ, ಯುವ ಸಮೂಹ ಸಾಮಾಜಿಕವಾಗಿ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಮಂಜುನಾಥ್, ಮಡಿಕೇರಿ ತಾಲೂಕು ಗೌರವಾಧ್ಯಕ್ಷ ಪ್ರದೀಪ್ ಕರ್ಕೆರ, ಮೂರ್ನಾಡು ಅಧ್ಯಕ್ಷ ಅಬುಬಕರ್, ಮಡಿಕೇರಿ ಉಪಾಧ್ಯಕ್ಷ ಚೇತು, ಸೋಮವಾರಪೇಟೆ ಯುವ ಘಟಕದ ಅಧ್ಯಕ್ಷ ಗಣೇಶ್ ಗೌಡ, ಜಿಲ್ಲಾ ಯುವ ಘಟಕದ ಉಪಾಧ್ಯಕ್ಷ ವೆಂಕಟೇಶ್, ಮೂರ್ನಾಡು ಕಾರ್ಯದರ್ಶಿ ರಾಶಿಕ್ ಉತ್ತಪ್ಪ, ಗೌರವಾಧ್ಯಕ್ಷ ಭೀಮಯ್ಯ, ಉಪಾಧ್ಯಕ್ಷ ರಿಯಾಜ್, ಇನ್ನಿತರರು ಭಾಗವಹಿಸಿದ್ದರು. ಕಾರ್ಯದರ್ಶಿ ರವೀಶ್ ಕಲ್ಕಂದೂರು ಕಾರ್ಯಕ್ರಮ ಸ್ವಾಗತಿಸಿ, ನಿರ್ವಹಿಸಿ, ವಂದಿಸಿದರು.