ಕೂಡಿಗೆ, ಜು. ೨೮: ಕೂಡಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶ್ರೀ ವಾಸವಿ ಕನ್ನಿಕಾಪರಮೇಶ್ವರಿ ಟ್ರಸ್ಟ್ ಸಹಯೋಗದಲ್ಲಿ ವಾಸವಿ ಬಾಲಕಿಯರ ಸಂಘದ ವತಿಯಿಂದ ಗಿಡ ನೆಡುವ ಕಾರ್ಯಕ್ರಮ ನಡೆಯಿತು.

ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ವಿದ್ಯಾರ್ಥಿಗಳು ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ ಶಾಲಾ ಪರಿಸರವನ್ನು ಸ್ವಚ್ಛವಾಗಿಡುವ ಸಂಕಲ್ಪ ಮಾಡಬೇಕು ಎಂದು ವಾಸವಿ ಬಾಲಕಿಯರ ಸಂಘದ ಅಧ್ಯಕ್ಷೆ ಸಾನ್ವಿ ಕೆ.ಪಿ. ಕರೆ ನೀಡಿದರು.

ಗಾಳಿ, ನೀರು, ಮಣ್ಣು ಹಾಗೂ ಪ್ರಾಣಿ-ಪಕ್ಷಿಗಳು ಪರಿಸರದ ಪ್ರಮುಖ ಅಂಗಗಳಾಗಿದ್ದು, ಭೂಮಿಯ ಮೇಲಿನ ಜೀವ ವೈವಿಧ್ಯ ಮತ್ತು ಪರಿಸರ ಸಮತೋಲನ ಕಾಪಾಡಲು ಸ್ವಚ್ಛ ಪರಿಸರ ಅತ್ಯಗತ್ಯವಾಗಿದೆ. ವಿದ್ಯಾರ್ಥಿಗಳು ಶಾಲಾ ಆವರಣದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಿ ಪರಿಸರ ಸಂರಕ್ಷಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಂಶುಪಾಲೆ ಕೆ.ಆರ್. ಭಾರತಿ ಮಾತನಾಡಿದರು.

ಈ ಸಂದರ್ಭ ಶಾಲೆಯ ನಿಲಯಪಾಲಕ ಜಗದೀಶ್, ಶಿಕ್ಷಕ ಹೆಚ್.ಬಿ. ದಿನೇಶ್ ಚಾರಿ, ಆರೋಗ್ಯಾಧಿಕಾರಿ ಎಂ.ಆರ್. ಮೀನು ಹಾಗೂ ವಾಸವಿ ಬಾಲಕಿಯರ ಸಂಘದ ಪದಾಧಿಕಾರಿಗಳಾದ ಕುಮಾರಿ ಸಾನಿಕ, ಶ್ರಾವ್ಯ, ನಿಹಾರಿಕ ಸೇರಿದಂತೆ ಇತರರು ಉಪಸ್ಥಿತರಿದ್ದರು.