ಮಡಿಕೇರಿ, ಜು. ೩೧: ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ನಾಪೋಕ್ಲು ಬ್ಲಾಕ್‌ನ ಹದಿನೇಳು ವಲಯಗಳಿಗೆ ನೂತನ ವಲಯ ಕಾಂಗ್ರೆಸ್ ಅಧ್ಯಕ್ಷರ ನೇಮಕಾತಿ ಪತ್ರವನ್ನು ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಅವರು ಮಡಿಕೇರಿಯ ಕೊಡಗು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ವಿತರಿಸಿದರು.

ನಾಪೋಕ್ಲು ವಲಯಕ್ಕೆ ಮಾಚೆಟ್ಟಿರ ಕುಶು ಕುಶಾಲಪ್ಪ, ಬಲ್ಲಮಾವಟಿಗೆ ಮಂಡಿರ ದಯಾ ಚಿಣ್ಣಪ್ಪ, ಬೆಟ್ಟಗೇರಿಗೆ ಕೊಡಗನ ತೀರ್ಥ ಪ್ರಸಾದ್, ಎಮ್ಮೆಮಾಡುವಿಗೆ ಕೂರಳಿಕಾರಂಡ ಕೆ.ಎಂ. ಮೂಸಾ, ನರಿಯಂದಡಕ್ಕೆ ಕೋಡಿರ ವಿನೋದ್ ನಾಣಯ್ಯ, ಮೇಕೇರಿಗೆ ಹೆಚ್.ಸಿ. ಪೊನ್ನಪ್ಪ, ಮದೆನಾಡುವಿಗೆ ಮಜ್ಜಿಗೆಮನೆ ದೀಪಕ್, ಪಾರಾಣೆಗೆ ಬೊಳ್ಳಂಡ ದಿಲೀಪ್, ಕಕ್ಕಬ್ಬೆಗೆ ಕಲಿಯಂಡ ಸಂಪನ್ ಅಯ್ಯಪ್ಪ, ಹಾಕತ್ತೂರುವಿಗೆ ಬಿ.ಕೆ. ನಾರಾಯಣ, ಅಯ್ಯಂಗೇರಿಗೆ ಅಬ್ದುಲ್ ರೆಹಮಾನ್ ಬಿ.ಎ., ಪೆರಾಜೆಗೆ ಜಯರಾಮ್ ಕೆ. ಪೆರುಮಂಡ, ಕರಿಕೆಗೆ ಬೇಕಲ್ ಹರಿಪ್ರಸಾದ್, ಕುಂದಚೇರಿಗೆ ಕೀರ್ತಿ ಉತ್ತಪ್ಪ, ಭಾಗಮಂಡಲಕ್ಕೆ ಕೆ.ಸಿ. ವೆಂಕಟೇಶ್, ಚೇರಂಬಾಣೆಗೆ ಕೆ. ರಮೇಶ್, ಚೆಂಬುವಿಗೆ ಹೊಸೂರು ರವಿರಾಜ್ ಹಾಗೂ ಸಂಪಾಜೆ ವಲಯಕ್ಕೆ ಕನ್ಯಾನ ವಿಜಯ್ ಕುಮಾರ್ ಅವರು ವಲಯ ಕಾಂಗ್ರೆಸ್ ಅಧ್ಯಕ್ಷರಾಗಿ ಮುಂದಿನ ಅವಧಿಯವರೆಗೆ ನೇಮಕಗೊಂಡಿದ್ದಾರೆ.

ನೇಮಕಾತಿ ಪತ್ರ ವಿತರಿಸಿ ಮಾತನಾಡಿದ ಧರ್ಮಜ ಉತ್ತಪ್ಪ, ವಲಯ ಕಾಂಗ್ರೆಸ್ ಅಧ್ಯಕ್ಷರು ತಮ್ಮ ವ್ಯಾಪ್ತಿಯ ಮುಖಂಡರು ಹಾಗೂ ಕಾರ್ಯಕರ್ತರನ್ನು ಒಗ್ಗೂಡಿಸಿಕೊಂಡು ಪಕ್ಷ ಸಂಘಟನೆಗೆ ಮುಂದಾಗಬೇಕು ಎಂದು ಕಿವಿಮಾತು ಹೇಳಿದರು. ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಇಸ್ಮಾಯಿಲ್ ಅವರು ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ನೀಡಿದ್ದು ಅದು ಅಂಗೀಕಾರಗೊAಡ ಹಿನ್ನಲೆಯಲ್ಲಿ ಹಿರಿಯ ಮುಖಂಡ ಸೌಕತ್ ಆಲಿ ಅವರನ್ನು ನಾಪೋಕ್ಲು ಬ್ಲಾಕ್ ಕಾರ್ಯಾಧ್ಯಕ್ಷರನ್ನಾಗಿ ನೇಮಿಸಿ ಪೂರ್ಣ ಪ್ರಮಾಣದ ಅಧಿಕಾರ ನೀಡಲಾಗಿದೆ ಎಂದು ತಿಳಿಸಿದರು.

ಪ್ರಚಾರ ಸಮಿತಿ ಅಧ್ಯಕ್ಷ ಟಿ.ಪಿ. ರಮೇಶ್ ಮಾತನಾಡಿ, ವಲಯ ಕಾಂಗ್ರೆಸ್ ತಕ್ಷಣದಿಂದಲೇ ಕಾರ್ಯಪ್ರವೃತ್ತರಾಗಿ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಜ್ಜುಗೊಳ್ಳುವಂತೆ ಕರೆ ನೀಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸೌಕತ್ ಆಲಿ, ಎಲ್ಲಾ ವಲಯ ಕಾಂಗ್ರೆಸ್ ಅಧ್ಯಕ್ಷರು, ಮುಖಂಡರು ಹಾಗೂ ಕಾರ್ಯಕರ್ತರು ಪಕ್ಷ ಸಂಘಟನೆಗೆ ನೆರವು ನೀಡುವಂತೆ ಕೋರಿದರು.

ಇತ್ತೀಚೆಗೆ ನಿಧನರಾದ ಚೆಂಬು ಭಾಗದ ಕಾಂಗ್ರೆಸ್ ಮುಖಂಡರು ಹಾಗೂ ಸಮಾಜಸೇವಕರಾದ ಆದಂ ಕುಂಞÂ ಅವರ ಆತ್ಮಕ್ಕೆ ಸಭೆಯಲ್ಲಿ ಸಂತಾಪ ಸೂಚಿಸಲಾಯಿತು.

ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಪುಷ್ಪಲತಾ, ವಾರ್ ರೂಂ ಅಧ್ಯಕ್ಷ ತೆನ್ನಿರ ಮೈನಾ, ಸಾಮಾಜಿಕ ಜಾಲತಾಣದ ಅಧ್ಯಕ್ಷ ಹೊಸೂರು ಸೂರಜ್, ಗೌರವ ಕಾರ್ಯದರ್ಶಿ ವಿ.ಪಿ. ಸುರೇಶ್, ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಆಚಾರ್ಯ, ನಗರ ಮಹಿಳಾ ಅಧ್ಯಕ್ಷೆ ಶಶಿಕಲಾ, ಫ್ಯಾನ್ಸಿ ಪಾರ್ವತಿ, ಬೊಳ್ಯಂಡ ಗಣೇಶ್ ಸ್ವರ್ಣಲತಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.