ಮಡಿಕೇರಿ, ಆ.೩: ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ವತಿಯಿಂದ ೩೧ನೇ ವರ್ಷದ ಕೊಡವ ಸಾಂಪ್ರದಾಯಿಕ ಕಕ್ಕಡ ಪದ್‌ನೆಟ್ಟ್ ಹಬ್ಬವನ್ನು ಮಡಿಕೇರಿ ಸಮೀಪದ ಕ್ಯಾಪಿಟಲ್ ವಿಲೇಜ್‌ನಲ್ಲಿ ಸಂಭ್ರಮದಿAದ ಆಚರಿಸಲಾಯಿತು.

ಸಿಎನ್‌ಸಿ ಅಧ್ಯಕ್ಷ ಎನ್.ಯು. ನಾಚಪ್ಪ, ಮುಖ್ಯ ಅತಿಥಿ ದೀಪಕ್ ತಿಮ್ಮಯ್ಯ ಹಾಗೂ ಮಂದಪAಡ ಮನೋಜ್ ಮಂದಣ್ಣ ಅವರು ಪೂರ್ವಜರ ಗೌರವ ಸೂಚಕವಾಗಿ ಗಾಳಿಯಲ್ಲಿ ಗುಂಡು ಹಾರಿಸಿದರು. ನಂತರ ಬಾಳೆಕಂಬ ಕತ್ತರಿಸುವ, ಬಾಳೆಬೇಂಗುವ ವಿಧಿಯನ್ನು ನೆರವೇರಿಸಲಾಯಿತು. ಮೆರವಣಿಗೆಯ ಮೂಲಕ ಭತ್ತದ ಗದ್ದೆಗೆ ತೆರಳಿದ ನಾಚಪ್ಪ ಅವರು ಕೃಷಿ ಋತುವಿನ ಆರಂಭವನ್ನು ಸೂಚಿಸಲು ಗಾಳಿಯಲ್ಲಿ ಗುಂಡು ಹಾರಿಸಿದರು. ಸಿಎನ್‌ಸಿ ಸದಸ್ಯರು, ಸ್ವಯಂಸೇವಕರು ಹಾಗೂ ಕೊಡವ, ಕೊಡವತಿಯರು ಸಾಂಪ್ರದಾಯಿಕವಾಗಿ ಭತ್ತದ ನಾಟಿ ಕಾರ್ಯ ಮಾಡಿದರು.

ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಎನ್.ಯು. ನಾಚಪ್ಪ ಅವರು ೧೦ ಅಂಶಗಳ ಸಾಂವಿಧಾನಿಕ ನಿರ್ಣಯವನ್ನು ಮಂಡಿಸಿದರು. ನೆರೆದಿದ್ದವರು ಸರ್ವಾನುಮತದಿಂದ ಸಹಿ ಮಾಡಿ ನಿರ್ಣಯವನ್ನು ಅಂಗೀಕರಿಸಿದರು. ಗುರು-ಕಾರೋಣ, ಸೂರ್ಯ-ಚಂದ್ರ, ಭೂತಾಯಿ, ಪ್ರಕೃತಿ ಮತ್ತು ಸಂವಿಧಾನದ ಹೆಸರಿನಲ್ಲಿ ಸಿಎನ್‌ಸಿಯ ೩೬ ವರ್ಷಗಳ ಸಾಂವಿಧಾನಿಕ ಹೋರಾಟಕ್ಕೆ ಸಂಪೂರ್ಣ ಬೆಂಬಲವಾಗಿ ಪ್ರತಿಜ್ಞೆ ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಕೊಡವ ಸಾಂಪ್ರದಾಯಿಕ ನಾಡ್ ಕೋಳಿ ಊಟ, ಮದ್ದ್ ಪಾಯಸ ಮತ್ತು ವಿವಿಧ ಕಕ್ಕಡ ಖಾದ್ಯಗಳನ್ನು ಸವಿದರು.

ಕೊಡವ ಭೂಮಿಯೇ ಕೊಡವರ ಆತ್ಮ

ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ಮಾಧ್ಯಮ ವರದಿಗಾರರು ಹಾಗೂ ಹಿಂದಿನ ಉಪ ಮುಖ್ಯಮಂತ್ರಿಗಳ ಮಾಜಿ ಮಾಧ್ಯಮ ಮತ್ತು ರಾಜಕೀಯ ಸಲಹೆಗಾರ ದೀಪಕ್ ತಿಮ್ಮಯ್ಯ ಅವರು, ಕೊಡವ ಭೂಮಿಯನ್ನು ಕಳೆದುಕೊಂಡರೆ ಮುಂದೆ ಕೊಡವರ ಅಸ್ತಿತ್ವಕ್ಕೆ ಧಕ್ಕೆ ಬರಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ಕೊಡವ ಉಡುಗೆ ತೊಡುಗೆ ತೊಟ್ಟು ನೃತ್ಯವನ್ನು ಪ್ರದರ್ಶಿಸುವುದರಿಂದ ಮಾತ್ರ ಕೊಡವ ಗುರುತನ್ನು ನಿರ್ಧರಿಸಲು ಸಾಧ್ಯವಿಲ್ಲ. ಕೊಡವರ ಆತ್ಮಗೌರವ ಮತ್ತು ನೈತಿಕತೆ ನಮ್ಮ ಪೂರ್ವಿಕರ ಭೂಮಿಯಲ್ಲಿ, ನಮ್ಮ ತಾಯ್ನಾಡಿನಲ್ಲಿ ಮಾತ್ರ ನೆಲೆಸಿದೆ. ಕೊಡವ ಭೂಮಿಯನ್ನು ಕಳೆದುಕೊಂಡರೆ ಕೊಡವರು, ಕೊಡವರನ್ನು ಕಳೆದುಕೊಂಡರೆ ಕೊಡವಲ್ಯಾಂಡ್ ಮತ್ತು ಕೊಡಗು ಇರುವುದಿಲ್ಲ. ಕೊಡವರು ಮತ್ತು ಕೊಡಗು ಪರಸ್ಪರ ಹೆಣೆದುಕೊಂಡಿದೆ, ಅವಿನಾಭಾವ ಸಂಬAಧ ಹೊಂದಿವೆ. ಕೊಡವರ ಜೀವನಚಕ್ರವು ಭೂಮಿ, ನೀರು ಮತ್ತು ಪ್ರಕೃತಿಯ ಸುತ್ತ ಸುತ್ತುತ್ತದೆ. ನಾವು ಇವುಗಳನ್ನು ಬಿಟ್ಟುಕೊಟ್ಟರೆ ಕೊಡವ ಅಸ್ತಿತ್ವಕ್ಕೆ ಧಕ್ಕೆಯಾಗಲಿದೆ. ಕೊಡವ ತಾಯ್ನಾಡಿನ ಭೂಮಿಯನ್ನು ಕಳೆದುಕೊಂಡರೆ, ನೀವು ಎಲ್ಲಿ ಕೊಡವ ನೃತ್ಯ ಮಾಡುತ್ತೀರಿ ಎಂದು ಪ್ರಶ್ನಿಸಿದರು.

ಕೊಡವರು ಈ ಮಣ್ಣಿಗೆ ಅಂಟಿಕೊAಡಿರುವ ಪೂರ್ವಜರನ್ನು ಪೂಜಿಸುವ ಪ್ರಾಚೀನ ಜನಾಂಗೀಯ ಸಮುದಾಯ. ನಮ್ಮ ಪೂರ್ವಜರು ಉನ್ನತ ಮೌಲ್ಯಗಳೊಂದಿಗೆ ಬದುಕಿದ್ದರು. ಇತ್ತೀಚಿನವರೆಗೆ ನಮಗೆ ಗುರು-ಕಾರೋಣ ಮಾತ್ರ ತಿಳಿದಿತ್ತು. ಈಗ ಅದನ್ನು ಹೊರಗಿನ ದೇವತೆಗಳಿಂದ ಬದಲಾಯಿಸಲಾಗುತ್ತಿದೆ. ಕೊಡವರು ಅರಿಯದೆ ರಾಜ್ಯದ ಬಹುಸಂಖ್ಯಾತ ಸಮುದಾಯದಲ್ಲಿ ಮುಳುಗಿ ಸಮೀಕರಣಗೊಳ್ಳುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಸಿಎನ್‌ಸಿಯ ಹೋರಾಟವನ್ನು ಶ್ಲಾಘಿಸಿದ ದೀಪಕ್ ತಿಮ್ಮಯ್ಯ ಅವರು ಎನ್.ಯು.ನಾಚಪ್ಪ ಅವರ ನಾಯಕತ್ವದಲ್ಲಿ ನಡೆಯುತ್ತಿರುವ ಅವಿರತ ಹೋರಾಟ ಕೊಡವ ಗುರುತು ಮತ್ತು ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸಲು, ಪ್ರತಿಧ್ವನಿಸಲು, ದೃಢಸಂಕಲ್ಪವನ್ನು ಪ್ರತಿಪಾದಿಸಲು ದೂರದೃಷ್ಟಿಯೊಂದಿಗೆ ಪ್ರಯಾಣಿಸುತ್ತಿದೆ. ಅವರು ನಿಜವಾದ ವೀರ ಕೊಡವ ಎಂದು ಹೆಮ್ಮೆ ವ್ಯಕ್ತಪಡಿಸಿದರು. ಪ್ರತಿಯೊಬ್ಬ ಕೊಡವರು ನಾಚಪ್ಪ ಅವರ ಉದಾತ್ತ ಕಾರ್ಯವನ್ನು ಮನಃಪೂರ್ವಕವಾಗಿ ಬೆಂಬಲಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎನ್.ಯು.ನಾಚಪ್ಪ ಅವರು, ಭಾರತದ ಸಂವಿಧಾನದ ೨೪೪ ಮತ್ತು ೩೭೧ನೇ ವಿಧಿಗಳು ಆರ್/ಡಬ್ಲುö್ಯ ೫, ೬ ಮತ್ತು ೮ನೇ ಪರಿಚ್ಛೇದಗಳ ಅಡಿಯಲ್ಲಿ ಗೂರ್ಖಾಲ್ಯಾಂಡ್, ಲೇಹ್, ಲಡಾಖ್ ಮತ್ತು ಈಶಾನ್ಯ ಭಾರತದ ರಾಜ್ಯಗಳ ಮಾದರಿಯಲ್ಲಿ ಕೊಡವಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆ ಮತ್ತು ಸ್ವ-ಆಡಳಿತ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮಂಡಿಸಿದರು.

ಪ್ರಾಚೀನ, ಮೂಲನಿವಾಸಿ, ಏಕ-ಜನಾಂಗೀಯ, ಪ್ರಕೃತಿ ಆರಾಧನಾ ಕೊಡವರನ್ನು ಭಾರತದ ಸಂವಿಧಾನ ಹಾಗೂ ವಿಶ್ವಸಂಸ್ಥೆಯ ಮೂಲನಿವಾಸಿ ಜನರ ಹಕ್ಕುಗಳ ಘೋಷಣೆಯಡಿಯಲ್ಲಿ ರಕ್ಷಿಸಬೇಕು. ಕೊಡವ ಸ್ಯಾಕ್ರಮೆಂಟ್ ಗನ್/ಥೋಕ್ ಅನ್ನು ಭಾರತದ ಸಂವಿಧಾನದ ೨೫, ೨೬ನೇ ವಿಧಿಗಳು ಆರ್/ಡಬ್ಲುö್ಯ ೮ನೇ ಪರಿಚ್ಛೇದದಡಿಯಲ್ಲಿ ಅವಶ್ಯ ಧಾರ್ಮಿಕ ಆಚರಣೆ ಎಂದು ಗುರುತಿಸಿ ಸಂರಕ್ಷಿಸಬೇಕು.

ಮೂಲನಿವಾಸಿ ಕೊಡವರ ಮಾತೃಭಾಷೆಯಾದ ಶಾಸ್ತಿçÃಯ ಕೊಡವ ಭಾಷೆಯನ್ನು ಭಾರತದ ಸಂವಿಧಾನದ ೮ನೇ ಪರಿಚ್ಛೇದಕ್ಕೆ ಸೇರಿಸಬೇಕು. ಪವಿತ್ರ ನೆಲಗಳು, ದೇವರ ಕಾಡುಗಳು, ಮಂದ್‌ಗಳು, ಪವಿತ್ರ ಸ್ಥಳಗಳು, ಜಾನಪದ ಕಲೆಗಳು, ಹಾಡು, ಪರೆಯಕಳಿ, ಉಮ್ಮತ್ತಾಟ್, ಕೋಲಾಟ್, ಬೊಳ್ಕಾಟ್ ಸೇರಿದಂತೆ ಕೊಡವರ ಶ್ರೀಮಂತ ಸಾಂಸ್ಕೃತಿಕ ಮತ್ತು ಜಾನಪದ ಪರಂಪರೆಯನ್ನು ಯುನೆಸ್ಕೋ ಅಮೂರ್ತ ಸಾಂಸ್ಕೃತಿಕ ಪರಂಪರೆ ಪಟ್ಟಿಗೆ ಸೇರಿಸಬೇಕು. ಕೊಡವ ಸ್ಮಾರಕಗಳು ಮತ್ತು ಕೊಡವ ದುರಂತಗಳಿಗೆ ಅಂತಾರಾಷ್ಟಿçÃಯ ಮಾನ್ಯತೆ ನೀಡಬೇಕು. ದೇವಟ್ ಪರಂಬ್‌ನಲ್ಲಿ ಕೊಡವ ಜನಾಂಗೀಯ ಹತ್ಯಾಕಾಂಡದ ಸ್ಮರಣಾರ್ಥ ಸ್ಮಾರಕ ನಿರ್ಮಿಸಬೇಕು ಎಂದು ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ಪುಲ್ಲೆರ ಸ್ವಾತಿ, ಅಪ್ಪಚ್ಚಿರ ರೀನಾ, ನಂದೇಟಿರ ಕವಿತಾ, ಚೋಳಪಂಡ ಜ್ಯೋತಿ, ನಂದಿನೆರವAಡ ರೇಖಾ, ಪಟ್ಟಮಾಡ ಲಲಿತಾ, ನಂದಿನೆರವAಡ ಬೀನಾ, ಕೂತಂಡ ಸರ್ಸು ಅಪ್ಪಯ್ಯ, ನಂದಿನೆರವAಡ ನಿಶಾ, ನಂದಿನೆರವAಡ ಸುಮಿತ್ರಾ- ಪ್ರಾಂಶುಪಾಲರು ಕೊಡಗು ವಿದ್ಯಾಲಯ, ಐಲಪಂಡ ಪುಷ್ಪಾ ಉತ್ತಪ್ಪ, ಮೇಷ್ಟ್ರು ಅಪ್ಪಯ್ಯ, ಅಲ್ಮಂಡ ಜೈ ಗಣಪತಿ, ನಂದೇಟಿರ ರವಿ ಸುಬ್ಬಯ್ಯ, ಪೊರಿಮಂಡ ದಿನಮಣಿ ಪೂವಯ್ಯ, ಬಾಚರಣಿಯಂಡ ಚಿಪ್ಪಣ್ಣ, ಮಂದಪAಡ ಮನೋಜ್, ಬೊಟ್ಟಂಗಡ ಗಿರೀಶ್ ಪೆಮ್ಮಯ್ಯ, ಪುಲ್ಲೆರ ಕಾಳಪ್ಪ, ಚೋಳಪಂಡ ನಾಣಯ್ಯ, ಕಿರಿಯಮಾಡ ರೀನ್ ಕೊಡವ, ಅಪ್ಪಚ್ಚಿರ ರಮ್ಮಿ ನಾಣಯ್ಯ, ಅಜ್ಜಿಕುಟ್ಟಿರ ಲೋಕೇಶ್ ಕೊಡವ, ನಂದಿನೆರವAಡ ನಂದಾ, ನಂದಿನೆರವAಡ ಟಿಪ್ಪು ಬಿದ್ದಪ್ಪ, ನಂದಿನೆರವAಡ ಅಚ್ಚಯ್ಯ, ನಂದಿನೆರವAಡ ಅಯ್ಯಣ್ಣ, ನಂದಿನೆರವAಡ ದಿನೇಶ್, ನಂದಿನೆರವAಡ ಮಿಟ್ಟು ಅಪ್ಪಯ್ಯ, ಅಪ್ಪೆಂಗಡ ಮಾಲೆ ಪೂಣಚ್ಚ, ಪೊರಿಮಂಡ ದಯನ್ ಪೊನ್ನಣ್ಣ, ಪೊರಿಮಂಡ ಮಣಿ ಈರಪ್ಪ, ಬದÀಲೆರ ಕೌಶಿಕ್ ಬೆಳ್ಳಿಯಪ್ಪ, ಐತಿಚಂಡ ಪೂವಣ್ಣ, ಪಾಲೆಕಂಡ ಪ್ರಧಾನ್ ಪೂಣಚ್ಚ, ಪಾಲೆಕಂಡ ಪ್ರತಾಪ್, ಬೊಳ್ದಂಡ ಸತೀಶ್, ಮಣವಟ್ಟಿರ ಸೋಮೇಶ್, ಮಚ್ಚಮಾಡ ರಣಜಿ, ಕಾಟುಮಣಿಯಂಡ ಉಮೇಶ್, ಮಂದಪAಡ ಸೂರಜ್, ಮಣವಟ್ಟಿರ ಸ್ವರೂಪ ಪೂವಯ್ಯ, ಮಣವಟ್ಟಿರ ನಂದಾ ಭೀಮಾ, ಅಜ್ಜಿನಿಕಂಡ ಸನ್ನಿ ಮಾಚಯ್ಯ, ತಂಬುಕುತ್ತಿರÀ ಸೋಮಯ್ಯ, ಅಚ್ಚಕಾಳೆರ ನವೀನ್ ಮೊಣ್ಣಪ್ಪ, ಪುಲ್ಲೆರ ಹರ್ಷ ಬೋಪಯ್ಯ, ಕೂತಂಡ ಅಕ್ಷತ್ ಅಯ್ಯಪ್ಪ, ಕೂತಂಡ ರೋಷನ್ ಉತ್ತಪ್ಪ, ಕಾಂತಿ ನಾಣಿಯಪ್ಪ, ಪುದಿಯೊಕ್ಕಡ ಬೋಪಣ್ಣ, ಕುಲ್ಲೇಟಿರ ಅರುಣ ಬೇಬ, ಬಡುವಂಡ ವಿಜಯ, ಪುದಿಯೊಕ್ಕಡ ಕಾಶಿ ಕರುಂಬಯ್ಯ, ಐಯಲಪಂಡ ಮಿಟ್ಟು ಉತ್ತಪ್ಪ, ಉದಿಯಂಡ ವಿನಯ್ ನವೀನ್ ಹಾಗೂ ಉದಿಯಂಡ ಸುಭಾಷ್, ಪುಲ್ಲೆರ ಹರ್ಷಾ ಬೋಪಯ್ಯ ಹಾಗೂ ಕೂತಂಡ ಅಕ್ಷತ್ ಅಯ್ಯಪ್ಪ ಪಾಲ್ಗೊಂಡಿದ್ದರು.