ಶ್ರೀಮಂಗಲ, ಆ. ೩: ಪೊನ್ನಂಪೇಟೆ ಕೊಡವ ಹಿತರಕ್ಷಣಾ ಬಳಗ ವತಿಯಿಂದ ಕಕ್ಕಡ ಪದ್‌ನೆಟ್ಟ್ ಪ್ರಯುಕ್ತ ಪೊನ್ನಂಪೇಟೆ ಮುಖ್ಯಬೀದಿಯಲ್ಲಿ ಪಂಜಿನ ಮೆರವಣಿಗೆ ನಡೆಯಿತು.

ನೂರಾರು ಸಂಖ್ಯೆಯಲ್ಲಿ ಜನಾಂಗದ ಮಹಿಳೆಯರು, ಪುರುಷರು, ಮಕ್ಕಳು ಪಾಲ್ಗೊಂಡಿದ್ದರು. ಪೊನ್ನಂಪೇಟೆ ಬಸ್ ನಿಲ್ದಾಣದಲ್ಲಿ ಸಾಮೂಹಿಕವಾಗಿ ವಾಲಗತಾಟ್‌ನಲ್ಲಿ ಕುಣಿದು ಸಂಭ್ರಮಿಸಿದರು.