ಮಡಿಕೇರಿ, ಆ. ೩: ಇಲ್ಲಿನ ಎಎಲ್ಜಿ ಕ್ರೆಸೆಂಟ್ ಶಾಲೆಯಲ್ಲಿ ಬ್ರಹ್ಮಗಿರಿ ಸಹೋದಯ ಕೊಡಗು ವತಿಯಿಂದ ಗುರುವಾರ ಸಿಬಿಎಸ್ಇ ಪಠ್ಯಕ್ರಮ ಆಧಾರಿತ ಶಾಲೆಗಳ ಅಂತರಶಾಲಾ ಪೋಸ್ಟರ್ ರಚನಾ ಸ್ಪರ್ಧೆ ನಡೆಯಿತು.
ಕಿರಿಯ ವಿಭಾಗದಲ್ಲಿ ಎಎಲ್ಜಿ ಕ್ರೆಸೆಂಟ್ ಶಾಲೆಯ ಅರ್ಹಾನ್ ಅಹ್ಮದ್ (ಪು), ಕೆವಿಜಿ ಐಪಿಎಸ್ ಸುಳ್ಯ ಶಾಲೆಯ ಲಿಕೇಶ್ ಪಿ.ಜೆ. (ದ್ವಿ), ಅಂಕುರ್ ಪಬ್ಲಿಕ್ ಶಾಲೆಯ ಹೇಶಿ ಪೊನ್ನಮ್ಮ (ತೃ) ಸ್ಥಾನ ಗಳಿಸಿದರು.
ಹಿರಿಯ ವಿಭಾಗದದಲ್ಲಿ ಸುಳ್ಯದ ಕೆವಿಜಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ನ ಪ್ರತೀಕ್ಷಾ (ಪು), ಎಎಲ್ಜಿ ಕ್ರೆಸೆಂಟ್ ಶಾಲೆಯ ರಿಷಾ ಫಾತಿಮಾ (ದ್ವಿ), ಅಂಕುರ್ ಪಬ್ಲಿಕ್ ಶಾಲೆಯ ಲಿಪಿ ಮಾದಪ್ಪ (ತೃ) ಬಹುಮಾನ ಪಡೆದುಕೊಂಡರು.
ಸ್ಪರ್ಧೆಗೆ ಜನರಲ್ ತಿಮ್ಮಯ್ಯ ಶಾಲೆಯ ಕಲಾ ಶಿಕ್ಷಕ ಭರತ್ ಹಾಗೂ ಗಾಳಿಬೀಡಿನ ಜವಾಹರರ್ ನವೋದಯ ಶಾಲೆಯ ಕಲಾ ಶಿಕ್ಷಕಿ ಸರೋಜ ಘಾಣತೆ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು. ವಿಜೇತರಿಗೆ ಟ್ರೋಫಿ ಹಾಗೂ ಪ್ರಮಾಣಪತ್ರಗಳನ್ನು ನೀಡಿ ಗೌರವಿಸಲಾಯಿತು.