ಕೊಡ್ಲಿಪೇಟೆ, ಆ. ೩: ಕೊಡ್ಲಿಪೇಟೆ ಹೇಮಾವತಿ ರೋಟರಿ ಸಂಸ್ಥೆಯ ೨೦೨೬-೨೭ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಸ್ಥಳೀಯ ಉದಯ್ ಕಂಫರ್ಟ್ ಸಭಾಂಗಣದಲ್ಲಿ ನಡೆಯಿತು.
ನೂತನ ಸಾಲಿನ ಅಧ್ಯಕ್ಷರಾಗಿ ಭಾನು ಪ್ರಕಾಶ್, ಕಾರ್ಯದರ್ಶಿಯಾಗಿ ಮೋಹನ್ ಕುಮಾರ್ ಸೇರಿದಂತೆ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಲ್ಲುಮಠದ ಶ್ರೀ ಮಹಾಂತ ಸ್ವಾಮೀಜಿ ಮಾತನಾಡಿ, ಸಮಾಜಮುಖಿ ಕಾರ್ಯಗಳಲ್ಲಿ ಮುಂಚೂಣಿಯಲ್ಲಿರುವ ರೋಟರಿ ಸಂಸ್ಥೆ ಸಮಾಜಕ್ಕೆ ಮಾದರಿಯಾಗಿದೆ.ಕೊಡ್ಲಿಪೇಟೆ ಭಾಗದಲ್ಲಿ ರೋಟರಿ ಸಂಸ್ಥೆಯು ಸಾರ್ವಜನಿಕವಾಗಿ ಮಾಡಿರುವ ಕಾರ್ಯಗಳು ಪ್ರಶಂಸನೀಯವಾಗಿದೆ ಎಂದರು.
ಪದಗ್ರಹಣ ನೆರವೇರಿಸಿದ ಹಿರಿಯ ರೊಟೇರಿಯನ್ ಪ್ರಕಾಶ್ ಕಾರಂತ್ ಮಾತನಾಡಿ, ಸಂಸ್ಥೆಯಲ್ಲಿ ಪದಾಧಿಕಾರಿಗಳು ಬದಲಾಗುತ್ತಾರೆಯೇ ಹೊರತು, ರೋಟರಿಯ ಸೇವೆ ಮತ್ತು ಧ್ಯೇಯೋದ್ದೇಶಗಳು ಬದಲಾಗುವುದಿಲ್ಲ. ಸೇವೆ ಮಾಡುವುದು ಮುಖ್ಯವಲ್ಲ; ಅದು ಜನರಿಗೆ ತಲುಪಬೇಕು ಎಂದರು.
ಮುಖ್ಯ ಅತಿಥಿಗಳಾಗಿ ರೋಟರಿ ಸಹಾಯಕ ರಾಜ್ಯಪಾಲ ವಸಂತ್ ಕುಮಾರ್, ವಲಯ ಸೇನಾನಿ ಮಲ್ಲೇಶ್ ಎ.ಎಸ್. ಮಾತನಾಡಿದರು. ಸಮಾರಂಭದಲ್ಲಿ ಕೆರಗನಹಳ್ಳಿ ನಿವಾಸಿ, ಹಾಸನ ಜಿಲ್ಲಾ ಸರಕಾರಿ ಕುಟುಂಬ ಕಲ್ಯಾಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಡಾ.ಜಗದೀಶ್ ಹಾಗೂ ವ್ಯಾಕ್ಸಿನೇಷನ್ ವಿಷಯದಲ್ಲಿ ಸಂಶೋಧನೆ ನಡೆಸಿ ಪ್ಲೊರಿಡಾ ಯೂನಿವರ್ಸಿಟಿಯಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಸ್ಥಳೀಯರಾದ ವೇದಾಂತ್ ಬೆಲ್ಲದ್, ದೊಡ್ಡಕೊಡ್ಲಿ ಗ್ರಾಮದ ನಿವಾಸಿ, ನೀಟ್ ಪರೀಕ್ಷೆಯಲ್ಲಿ ಉನ್ನತ ಅಂಕ ಗಳಿಸಿ ಕಾರವಾರದಲ್ಲಿ ಮೊದಲ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿರುವ ಡಿ.ಕೆ. ಡಿಸೀಲ್ ಅವರುಗಳನ್ನು ಸನ್ಮಾನಿಸಲಾಯಿತು.
ನಿರ್ಗಮಿತ ಅಧ್ಯಕ್ಷ ಉಮೇಶ್ ಯು.ಹೆಚ್., ಕಾರ್ಯದರ್ಶಿ ಗಣೇಶ್ ಚೌಧÀರಿ, ವಲಯ ಉಪಾಧ್ಯಕ್ಷ ಹೆಚ್.ಎಂ. ದಿವಾಕರ್, ಪ್ರಮುಖರಾದ ಡಾ. ಉದಯ್‌ಕುಮಾರ್, ಪಿ.ಕೆ. ರವಿ, ಲಿಖಿತ್ ದಾಮೋಧರ್, ಬಿ.ಎಸ್. ಸುಂದರ್, ಸಂಜೀವ ಪೂಜಾರಿ, ಹೇಮಾವತಿ ರೋಟರಿಯ ಮಾಜಿ ಅಧ್ಯಕ್ಷರುಗಳಾದ ಪ್ರವೀಣ್, ದಿನೇಶ್, ಅಮೃತ್ ಕುಮಾರ್, ಯತೀಶ್, ಮಾದವ್ ಲಾಲ್ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.