ಶನಿವಾರಸಂತೆ, ಆ. ೩: ಕೊಡ್ಲಿಪೇಟೆಯಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗ ದಳ ಸಂಘಟನೆಯ ನೂತನ ಘಟಕವನ್ನು ಉದ್ಘಾಟಿಸಲಾಯಿತು. ೧೭ಕ್ಕೂ ಹೆಚ್ಚಿನ ಕಾರ್ಯಕರ್ತರಿಗೆ ಸಂಘಟನೆಯ ಜವಾಬ್ದಾರಿಯನ್ನು ನೀಡಲಾಯಿತು.
ವಿಶ್ವ ಹಿಂದೂ ಪರಿಷತ್ ನೂತನ ಘಟಕದ ಅಧ್ಯಕ್ಷರಾಗಿ ಲೋಕೇಶ್, ಕಾರ್ಯದರ್ಶಿಯಾಗಿ ಧರಣೀಶ್ ಆಯ್ಕೆಯಾದರು. ಭಜರಂಗದಳ ತಾಲೂಕು ಸಹ ಸಂಚಾಲಕರಾಗಿ ಕೊಡ್ಲಿಪೇಟೆ ಧನು, ಕೊಡ್ಲಿಪೇಟೆ ಭಜರಂಗದಳ ಸಂಚಾಲಕರಾಗಿ ದರ್ಶನ್, ಸಹ ಸಂಚಾಲಕರಾಗಿ ಅಭಿ, ಪ್ರತಾಪ್, ಅವಿನಾಶ್, ಭಜರಂಗದಳ ಗೋ ರಕ್ಷಕ ಪ್ರಮುಖ್ ಮಣಿ, ಕಿಶನ್, ಪ್ರಚಾರ ಪ್ರಮುಖ್ ಪವನ್, ಅಖಾಡ ಪ್ರಮುಖ್ ಆಗಿ ಎಚ್.ಆರ್.ಕಿಶನ್, ಸೇವಾ ಪ್ರಮುಖ್ ಆಗಿ ಸಂಜು, ವಿದ್ಯಾರ್ಥಿ ಪ್ರಮುಖ್ ಆಗಿ ಆದರ್ಶ ಆಯ್ಕೆಯಾದರು. ಕೊಡ್ಲಿಪೇಟೆ ಘಟಕದ ಅಧ್ಯಕ್ಷರಾಗಿ ಪುನೀತ್, ಕಾರ್ಯದರ್ಶಿಯಾಗಿ ಸತೀಶ್ ಹಾಗೂ ಭಜರಂಗದಳ ಸಂಚಾಲಕರಾಗಿ ಭರತ್ ಅವರುಗಳನ್ನು ಆಯ್ಕೆ ಮಾಡಲಾಯಿತು.