ಮಡಿಕೇರಿ, ಆ. ೧೫: ಕಳೆದ ೪೦ ವರ್ಷಗಳಿಂದ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಏಳ್ನಾಡ್ ಕೊಡವ ಸಂಘದ ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಐಮುಡಿಯಂಡ ಜೆ. ಭೀಮಯ್ಯ ಕಾರ್ಯದರ್ಶಿಯಾಗಿ ಸರ್ಕಂಡ ಕೆ. ದೊರೆಮಣಿ ಸೋಮಯ್ಯ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾದ್ಯಕ್ಷರಾಗಿ ತಂಬುಕುತ್ತಿರ ಮೇದಕ್ಕ ಚಂಗಪ್ಪ, ಖಜಾಂಚಿಯಾಗಿ ಮಂಡಿರ ಸಿ. ವಿನೋದ್, ಸಹಕಾರ್ಯದರ್ಶಿಯಾಗಿ ಮೋಟನಾಳಿರ ಜೀವನ್, ಸಹ ಖಜಾಂಚಿಯಾಗಿ ತಂಬುಕುತ್ತಿರ ರಮೇಶ್ ಈರಪ್ಪ ಹಾgU ೨೮ ಮಂದಿ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಇತ್ತೀಚೆಗೆ ಬೆಂಗಳೂರು ಕೊಡವ ಸಮಾಜದಲ್ಲಿ ಮಂಡಿರ ಸಿ. ಬೋಪಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ, ಮುಂದಿನ ಅವಧಿಯ ಆಡಳಿತ ಮಂಡಳಿಗೆ ಆಯ್ಕೆ ಪ್ರಕ್ರಿಯೆ ನಡೆಯಿತು. ಚುನಾವಣಾಧಿಕಾರಿಯಾಗಿ ಸೋಮಯ್ಯ ಅವರು ಕಾರ್ಯನಿರ್ವಹಿಸಿದರು.