ಕುಶಾಲನಗರ, ಅ. ೨೮: ಮಹಿಳಾ ಸುರಕ್ಷತೆಯ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಬೆಂಗಳೂರಿನಲ್ಲಿ ನಡೆದ ೨ನೇ ರಾಷ್ಟಿçÃಯ ಟೈಲರಿಂಗ್ ಸಮ್ಮೇಳನ-೨೦೨೬ರಲ್ಲಿ ಕೊಡಗು ಜಿಲ್ಲೆಯ ನೌಶೀನಾ ಎಂ.ಯು. ಅವರು ಭಾಗವಹಿಸಿ ಆಸ್ಕರ್ಸ್ ಬುಕ್ ಆಫ್ ರೆಕಾರ್ಡ್ಸ್ ಪ್ರಮಾಣಪತ್ರವನ್ನು ಪಡೆದುಕೊಂಡಿದ್ದಾರೆ. ಬೆಂಗಳೂರಿನ ಕಂಬಿಪುರದಲ್ಲಿರುವ ರಾಜರಾಜೇಶ್ವರಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಎಸಿಎಸ್ ಕನ್ವೆನ್ಷನ್ ಹಾಲ್‌ನಲ್ಲಿ ಇಂಡಿಯನ್ ಟೈಲರಿಂಗ್ ಕೌನ್ಸಿಲ್‌ನ ಕರ್ನಾಟಕ ರಾಜ್ಯ ಘಟಕವು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಮಾಣ ಪತ್ರ ವಿತರಿಸಲಾಯಿತು.

ಆಸ್ಕರ್ಸ್ ಬುಕ್ ಆಫ್ ರೆಕಾರ್ಡ್ಸ್ನ ಅಧಿಕೃತ ವಿಶ್ವ ದಾಖಲೆ ಪಾಲುದಾರಿಕೆಯೊಂದಿಗೆ ನಡೆದ ಈ ಕಾರ್ಯಕ್ರಮದಲ್ಲಿ, ಮಹಿಳಾ ಸುರಕ್ಷತೆಯ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಒಂದೇ ಸಮಯದಲ್ಲಿ ಅತಿ ಹೆಚ್ಚು ಟೈಲರ್‌ಗಳು ಒಂದು ಗಂಟೆ ೩೦ ನಿಮಿಷಗಳೊಳಗೆ ಮಹಿಳೆಯರ ಉಡುಪುಗಳನ್ನು ಕೈಯಿಂದ ಹೊಲಿಯುವ ವಿಶ್ವ ದಾಖಲೆ ಪ್ರಯತ್ನ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲೆಯಿಂದ ನೌಶೀನಾ ಎಂ.ಯು. ಅವರು ಭಾಗವಹಿಸಿದ್ದರು. ಕುಶಾಲನಗರದಲ್ಲಿ ಗ್ಲೋಬಲ್ ಕೆರಿಯರ್ ಅಕಾಡೆಮಿಯನ್ನು ನಡೆಸುತ್ತಿರುವ ನೌಶೀನಾ ಎಂ.ಯು. ಅವರು ಮಹಿಳೆಯರಿಗೆ ವಿವಿಧ ವೃತ್ತಿಪರ ಕೌಶಲ್ಯಗಳನ್ನು ಕಲಿಸುವ ಮೂಲಕ ಸ್ವಾವಲಂಬಿ ಬದುಕು ರೂಪಿಸಿಕೊಳ್ಳಲು ನೆರವಾಗುತ್ತಿದ್ದಾರೆ.