ಮಡಿಕೇರಿ, ಜು. ೮: ತಿತಿಮತಿ ಅರಣ್ಯ ವಲಯದ ವ್ಯಾಪ್ತಿಗೆ ಒಳಪಡುವ ನೊಕ್ಯ, ಸಿದ್ದಾಪುರ, ಹೆಬ್ಬಾಲೆ, ಭದ್ರಗೊಳ, ಬಾಳಾಜಿ, ಮಾಯಮುಡಿ, ಧನುಗಾಲ ಮತ್ತು ರುದ್ರಬೀಡು ಗ್ರಾಮಗಳ ಖಾಸಗಿ ಜಮೀನುಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟುವ ಕಾರ್ಯಾಚರಣೆಯನ್ನು ತಾ. ೧೦ ಮತ್ತು ೧೧ರಂದು ಪೂರ್ವಾಹ್ನ ೯ ಗಂಟೆಯಿAದ ೬.೩೦ ಗಂಟೆವರೆಗೆ ಹಮ್ಮಿಕೊಳ್ಳಲಾಗಿದೆ. ತೋಟದ ಮಾಲೀಕರು ಮತ್ತು ಕಾರ್ಮಿಕರು ತಮ್ಮ ಕೆಲಸ ಕಾರ್ಯಗಳನ್ನು ನಿಲ್ಲಿಸುವಂತೆ ಹಾಗೂ ಕಾರ್ಯಾಚರಣೆ ಸಮಯದಲ್ಲಿ ಸಾರ್ವಜನಿಕರು, ಗ್ರಾಮಸ್ಥರು, ಶಾಲಾ - ಕಾಲೇಜು ಮಕ್ಕಳು, ಕಾರ್ಮಿಕರು ಹಾಗೂ ಬೆಳೆಗಾರರು ಎಚ್ಚರಿಕೆಯಿಂದ ಇದ್ದು ಕಾಡಾನೆ ಕಾರ್ಯಾಚರಣೆ ಸಮಯದಲ್ಲಿ ಪಟಾಕಿ ಸಿಡಿಸದೆ ಇಲಾಖೆಯೊಂದಿಗೆ ಸಹಕಾರ ನೀಡುವಂತೆ ತಿತಿಮತಿ ವಲಯ ಅರಣ್ಯಾಧಿಕಾರಿ ತಿಳಿಸಿದ್ದಾರೆ.